ಭೋಜನ ಕೂಟ ಮುಂದೂಡಿದ ಸಿಎಂ ಯಡಿಯೂರಪ್ಪ! ನಾಳೆ ಸಂಜೆ 4ಕ್ಕೆ ಸಚಿವ ಸಂಪುಟ ಸಭೆ

bsy
Published on

ಬೆಂಗಳೂರು: ಬಿಎಸ್​ವೈ ದೆಹಲಿಯಿಂದ ಹಿಂದಿರುಗಿದ ಬಳಿಕ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ನಾಯಕತ್ವ ವಿಚಾರದಲ್ಲಿ ಇದೀಗ ದೊಡ್ಡ ಸಂಖ್ಯೆಯಲ್ಲಿ ಮಠಾಧಿಪತಿಗಳ ಮಧ್ಯ ಪ್ರವೇಶವಾಗಿದೆ. ಇಂತಹ ಸಂದರ್ಭದಲ್ಲಿ ಜು.25ರಂದು ಶಾಸಕರಿಗೆ ಸಿಎಂ ಏರ್ಪಡಿಸಿದ್ದ ಭೋಜನಾ ಕೂಟವನ್ನು ಅಚ್ಚರಿಯ ಬೆಳವಣಿಗೆಯಲ್ಲಿ ಮುಂದೂಡಿಲಾಗಿದೆ. ಅಲ್ಲದೆ ನಾಳೆ(ಗುರುವಾರ) ಸಂಜೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯನ್ನು ಸಿಎಂ ಯಡಿಯೂರಪ್ಪ ಕರೆದಿರುವುದು ಕುತೂಹಲ ಮೂಡಿಸಿದೆ.

ಜುಲೈ 26ರಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ 26ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಸಾಧನಾ ಕಾರ್ಯಕ್ರಮ ನಡೆಯಲಿದೆ. ‌ಸಭೆಗೂ ಮುನ್ನಾದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದ ಸಿಎಂ ಅಂದು ರಾತ್ರಿಯ ಭೋಜನಕೂಟ ಏರ್ಪಡಿಸಿದ್ದರು. ಸದ್ಯ ದಿಢೀರ್ ಬೆಳವಣಿಗೆಯಲ್ಲಿ ಶಾಸಕಾಂಗ ಪಕ್ಷದ ಸಭೆ ರದ್ದುಗೊಳಿಸಿದ್ದ ಯಡಿಯೂರಪ್ಪ, ಜು.25ರಂದು ಏರ್ಪಾಡಾಗಿದ್ದ ಶಾಸಕರ ಭೋಜನಾ ಕೂಟ ಮುಂದೂಡಿದ್ದಾರೆ. ಇದರ ಬೆನ್ನಲ್ಲೇ ನಾಳೆ ಸಂಜೆ 4 ಗಂಟೆಗೆ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಜು.27 ಅಥವಾ ಬೇರೊಂದು ದಿನ ಭೋಜನಕೂಟ ಏರ್ಪಡಿಸಲಿದ್ದಾರೆ ಎನ್ನಲಾಗಿದೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net