ಸಚಿವ ಶ್ರೀರಾಮುಲು ದೆಹಲಿಗೆ ದಿಢೀರ್ ಭೇಟಿ! ರಾತ್ರಿಯೇ ಹೈಕಮಾಂಡ್​ ಕರೆ ಮಾಡಿದ್ದೇಕೆ?

B Sriramulu Ballari
Published on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಿಗೂಢ ಬೆಳವಣಿಗೆ ನಡೆಯುತ್ತಿರುವ ಮಧ್ಯೆಯೇ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬುಧವಾರ ಬೆಳಗ್ಗೆ ದೆಹಲಿಗೆ ದಿಢೀರ್ ಪ್ರಯಾಣ ಬೆಳೆಸಿರುವುದು ಕುತೂಹಲ ಕೆರಳಿಸಿದೆ.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಹ್ವಾನದ ಮೇರೆಗೆ ತೆರಳಿದ್ದು, ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ಚರ್ಚೆಗಾಗಿ ಕರೆಯಿಸಿಕೊಂಡಿದ್ದಾರೆ. ಇದೇ ವಿಷಯದ ಮಾತುಕತೆಗೆ ಇನ್ನೂ ಕೆಲವು ಹಿರಿಯ ಸಚಿವರಿಗೆ ವರಿಷ್ಠರು ಬುಲಾವ್ ನೀಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿರಿ ಧರ್ಮ ಉಳಿಯಬೇಕಂದ್ರೆ ರಾಜಕೀಯಕ್ಕೆ ಬರಲೂ ಸಿದ್ಧ! ಶೀಘ್ರವೇ ಪ್ರಧಾನಿ ಬಳಿಗೆ ನಿಯೋಗ: ಶಾಂತವೀರ ಶ್ರೀಗಳು

ಈ ಮಧ್ಯೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಂಗಳವಾರ ರಾತ್ರಿಯೇ ದೆಹಲಿಗೆ ತೆರಳಿದ್ದು, ಕಾಲಾವಕಾಶ ನೀಡಲಿರುವ ವರಿಷ್ಠರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ.

ಕಾವೇರಿಗೆ ಮಠಾಧೀಶರ ದೌಡು: ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮಠಾಧೀಶರ ದೌಡು ಇಂದು ಮುಂದುವರಿದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿವಿಧ ಸಮುದಾಯ ಜಿಲ್ಲೆಗಳ ಮಠಾಧೀಶರು ಭೇಟಿಯಾಗಿ ನೈತಿಕ ಬೆಂಬಲ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net