

ಬೆಂಗಳೂರು: ಕರ್ನಾಟದಕ ಮುಖ್ಯಮಂತ್ರಿಯಾಗಿ ಇಂದು ಬೆಳಗ್ಗೆ 11ಕ್ಕೆ ಪದಗ್ರಹಣ ಮಾಡಿದ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿರುವ ಸಿಎಂ ಕಚೇರಿಗೆ ತೆರಳಿ ಪೂಜೆ ಸಲ್ಲಿಸಿದರು. ಪೂಜೆ ಮೂಲಕ ಸಿಎಂ ಕುರ್ಚಿ ಮೇಲೆ ಕುಳಿತು ನಗೆ ಬೀರಿದರು.
ಇನ್ನು ಕೆಲವೇ ಕ್ಷಣದಲ್ಲಿ ಬೊಮ್ಮಾಯಿ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಆ ನಂತರ ಕೇಂದ್ರದ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.