ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚುವ ಸಾಧ್ಯತೆ ಇದೆ: ಆತಂಕಕಾರಿ ವಿಷಯ ಹೇಳಿದ ಡಾ.ಸುಧಾಕರ್​

sudhakar
Published on

ಬೆಂಗಳೂರು: ರಾಜ್ಯದಲ್ಲಿ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ರೋಗದ ಚಿಕಿತ್ಸೆಗೆ ಬೇಕಾದ ಔಷಧದ ಕೊರತೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರ ಜತೆಗೆ ಗುರುವಾರ ಮಾತನಾಡಿದ ಸುಧಾಕರ್​, ಸದ್ಯಕ್ಕೆ ಲಭ್ಯ ಔಷಧವನ್ನು 6 ವಿಭಾಗಗಳಿಗೆ ಹಂಚಲಾಗಿದೆ. ತಕ್ಷಣಕ್ಕೆ 500 ವೈಯಲ್ಸ್ ಕಳುಹಿಸಬೇಕೆಂಬ ಕೋರಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಒಟ್ಟು 20,000 ವೈಯಲ್ಸ್​ಗೆ ಬೇಡಿಕೆ ಇಡಲಾಗಿದೆ ಎಂದರು. ಇದನ್ನೂ ಓದಿರಿ ಬಿಜೆಪಿ ಶಾಸಕ ಪಿ.ರಾಜೀವರ ತಾಯಿ ಕರೊನಾಗೆ ಬಲಿ

ವಿಜಯಪುರ ಜಿಲ್ಲೆಯಲ್ಲಿ ಅತಿಹೆಚ್ಚು 30 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಮಧುಮೇಹ ಉಳ್ಳವರಿಗೆ ಪರೀಕ್ಷಿಸಿ ಈ ಔಷಧ ನೀಡಬೇಕೆಂದು ತಿಳಿಸಿದ್ದು, ತಜ್ಞರ ವರದಿ ಪ್ರಕಾರ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net