ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್​ರ ತಾಯಿ ನಿಧನ

somanagowda patil mother
Published on

ವಿಜಯಪುರ: ದೇವರ ಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಅವರ ತಾಯಿ, ಮಾಜಿ ಸಚಿವ ಬಿ.ಎಸ್.ಪಾಟೀಲ್ ಸಾಸನೂರು ಅವರ ಪತ್ನಿ ಗುರುಬಾಯಿ ಬಸನಗೌಡ ಪಾಟೀಲ್ ಮಂಗಳವಾರ ನಿಧನರಾದರು.

ಗುರುಬಾಯಿ ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗುರುಬಾಯಿ ಅವರು ಮಂಗಳವಾರ ಮದ್ಯಾಹ್ನ ಕೊನೆಯುಸಿರೆಳೆದರು. ಇವರಿಗೆ ಶಾಸಕ ಸೋಮನಗೌಡ ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.

ಬುಧವಾರ ಮಧ್ಯಾಹ್ನ ಸ್ವಗ್ರಾಮ ಸಾಸನೂರು ಗ್ರಾಮದಲ್ಲಿ ಲಿಂಗಾಯತ ಸಂಪ್ರದಾಯಂತೆ ಗುರುಬಾಯಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net