ಶಾಸಕ ಸಿ.ಟಿ.ರವಿ ತಂದೆ ತಿಮ್ಮೇಗೌಡ ನಿಧನ

ct ravi father
Published on

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರ ತಂದೆ ತಿಮ್ಮೇಗೌಡ(97) ಶನಿವಾರ ನಿಧನರಾದರು.

ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ತಿಮ್ಮೇಗೌಡರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಾಗರವಳ್ಳಿಯಲ್ಲಿ ಭಾನುವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಿಮ್ಮೇಗೌಡ ಅವರು ಪತ್ನಿ ಹೊನ್ನಮ್ಮ, ಪುತ್ರರಾದ ಸಿ.ಟಿ. ರವಿ, ಸಿ.ಟಿ. ರಘು, ಪುತ್ರಿಯರಾದ ರೇಣುಕಾ, ರೋಹಿಣಿ, ರೇವತಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net