

ಶಿವಮೊಗ್ಗ: ಭದ್ರಾವತಿ ತಹಸೀಲ್ದಾರ್ ಕಚೇರಿಯಿಂದ ಮೆಸ್ಕಾಂ ಹಲವು ವರ್ಷಗಳಿಂದ 10 ಲಕ್ಷ ರೂ.ಗಿಂತ ಅಧಿಕ ಬಿಲ್ ಬಾಕಿ ಉಳಿಸಿಕೊಂಡಿದ್ದು ಅದನ್ನು ಪಾವತಿಸುವಂತೆ ಮಾಡಲು ಮೆಸ್ಕಾಂ ಅಧೀಕ್ಷಕ ಅಭಿಯಂತ ಶಶಿಧರ್ ಅವರು ಉಸ್ತುವಾರಿ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ಒಂದೇ ಕಚೇರಿಯಿಂದ 10 ಲಕ್ಷ ರೂ. ಬಿಲ್ ಬಾಕಿ ಇದೆ ಎಂದರೆ ಏನರ್ಥ. ಬೇರೆ ಯಾವುದೇ ತಾಲೂಕಿನಲ್ಲೂ ಇಷ್ಟು ಬಾಕಿ ಇಲ್ಲ ಏಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿ ಸೆಲ್ವಮಣಿ, ಲಿಫ್ಟ್ ಇರುವ ಕಾರಣ ವಿದ್ಯುತ್ ಶುಲ್ಕ ಹೆಚ್ಚಿಗೆ ಬರುತ್ತಿದೆ. ಪ್ರತಿ ತಿಂಗಳು 54 ಸಾವಿರ ರೂ. ಬಿಲ್ ಪಾವತಿಸಲಾಗುತ್ತಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಶೇ.79ರಷ್ಟು ಫಲಾನುಭವಿಗಳು ಪ್ರತಿ ತಿಂಗಳು 9 ಕೋಟಿ ರೂ.ಗಳ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದರು.