ಬಿಗ್​ ಬಾಸ್​​ ವಿಜೇತ, ನಟ ಸಿದ್ಧಾರ್ಥ್ ಶುಕ್ಲಾ ನಿಧನ

sidharth shukla
Published on

ಮುಂಬೈ: ನಟ, ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-13ರ ವಿಜೇತ ಸಿದ್ಧಾರ್ಥ್ ಶುಕ್ಲಾ (40) ಗುರುವಾರ ಬೆಳಗ್ಗೆ ನಿಧನರಾದರು.

ಇಂದು ಬೆಳ್ಳಗ್ಗೆ ತೀವ್ರ ಹೃದಯಾಘಾತಕ್ಕೊಳಗಾದ ಸಿದ್ಧಾರ್ಥ್​ ಶುಕ್ಲಾ ಅವರನ್ನು ಮುಂಬೈನ ಕೂಪರ್​ ಆಸ್ಪತ್ರೆಗೆ ಕುಟುಂಬಸ್ಥರು ಕರೆ ತಂದರಾದರೂ ಬದುಕಲಿಲ್ಲ. ಮೃತರಿಗೆ ತಾಯಿ ಮತ್ತು ಇಬ್ಬರು ಸಹೋದರಿಯರು ಇದ್ದಾರೆ.

ಉತ್ತರಪ್ರದೇಶದಲ್ಲಿ 1980ರ ಡಿಸೆಂಬರ್ 12ರಂದು ಮುಂಬೈನಲ್ಲಿ ಅಶೋಕ್ ಶುಕ್ಲಾ ಮತ್ತು ರೀಟಾ ಶುಕ್ಲಾ ದಂಪತಿ ಮಗನಾಗಿ ಜನಿಸಿದ ಸಿದ್ಧಾರ್ಥ್, ಮಾಡೆಲ್​ ಆಗಿ ವೃತ್ತಿ ಜೀವನ ಆರಂಭಿಸಿದ್ದರು. 'ಬಾಬುಲ್ ಕಾ ಆಂಗನ್ ಚೂಟೇ ನಾ' ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದ ಸಿದ್ಧಾಥ್​, 'ಬಾಲಿಕಾ ವಧು' ಧಾರಾವಾಹಿ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.

'ಹ೦ಪ್ಟಿ ಶರ್ಮಾ ಕೀ ದುಲ್ಹನಿಯಾ' ಸಿನಿಮಾದಲ್ಲಿ ಪೋಷಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. 'ಬಿಗ್ ಬಾಸ್ ಸೀಸನ್​-13' ಸಿದ್ಧಾರ್ಥ್​ ಅವರನ್ನು ಅತ್ಯಂತ ಜನಪ್ರಿಯವನ್ನಾಗಿಸಿತು. ಏಕ್ತಾ ಕಪೂರ್ ಅವರ ಜನಪ್ರಿಯ ಕಾರ್ಯಕ್ರಮ 'ಬ್ರೋಕನ್ ಬಟ್ ಬ್ಯೂಟಿಫುಲ್ 3'ನಲ್ಲಿ ಸಿದ್ಧಾರ್ಥ್​ ಅಗಸ್ತ್ಯನ ಪಾತ್ರ ನಿರ್ವಹಿಸಿದ್ದರು. ಇದೇ ಇವರ ನಟನೆಯ ಕೊನೇ ಪ್ರದರ್ಶನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net