ಉನ್ನತ ಶಿಕ್ಷಣದಿಂದ ಉತ್ತಮ ಭವಿಷ್ಯ

IMG-20230926-WA0029
Published on

ಕೋಲಾರ: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ರವಿ ಸಮೂಹ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಇ.ಗೋಪಾಲಪ್ಪ ಹೇಳಿದರು.


ರವಿ ಸಮೂಹ ವಿದ್ಯಾಸಂಸ್ಥೆ ವತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರಲ್ಲಿ ಮಂಗವಾರ ಪದವಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸ್ವಾಗತ ಮತ್ತು ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಗಿಂತ ಬೇರೊಂದು ಆಸ್ತಿ ದೊಡ್ಡದಲ್ಲ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯೆ ಬಹಳ ಮುಖ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಕಲ್ಪಿಸಬೇಕು ಎಂಬ ಕನಸ್ಸು ಒತ್ತು ಶಾಲಾ ಕಾಲೇಜಿಗೆ ಕಳುಹಿಸುತ್ತಾರೆ, ಅವರ ಕನಸು ಈಡೇರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ತಿಳಿಸಿದರು.
ನಿರ್ದೇಶಕ ಜಿ.ನರೇಶ್ ಬಾಬು, ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕೌಶಲ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾಗಿ ಬೇಕಾಗಿರುವ ತರಬೇತಿಯನ್ನು ನೀಡಲಾಗುತ್ತಿದೆ. ಕೇವಲ ಪದವಿಗಳನ್ನು ಗಳಿಸಿದರೆ ಸಾಲದು, ಸಮಾಜದ ಹೇಳಿಗೆಗಾಗಿ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಷ್ಟಪಟ್ಟು ಪೋಷಕರು ನಿಮಗೆ ಶಿಕ್ಷಣ ಕೊಡಿಸಿರುತ್ತಾರೆ, ಅದರ ಹಿಂದಿನ ಕಷ್ಟವನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಂಡಾಗ ಪೋಷಕರಿಗೆ ಸಿಗುವ ಖುಷಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂದು ತಿಳಿಸಿದರು.
ಪ್ರಚಾರ್ಯ ಮಂಜುನಾಥ್ ಮಾತನಾಡಿ, ಜೀವನವನ್ನು ರೂಪಿಸಿಕೊಳ್ಳುವ ಹಂತ ಪದವಿ, ಈ ಹಂತದಲ್ಲಿ ಎಡವಿದರೆ ಇಡೀ ಜೀವನ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನುಷ್ಯನ ಮೇಲೆ ಬೀರುವ ಒತ್ತಡಗಳನ್ನು ನಿವಾರಣೆ ಮಾಡಿಕೊಳ್ಳಬೇಕು, ಇದರಿಂದ ಉತ್ತನ ಭವಿಷ್ಯ ರೂಪಿಸಿಕೊಳ್ಳಬಹುದು. ಪ್ರತಿಯೊಬ್ಬರಿಗೂ ಗುರಿ ಎಂಬುದು ಇರಬೇಕು, ಗುರಿ ಸಾಧನೆಗೆ ಒಳ್ಳೆಯ ಉದ್ದೇಶಗಳನ್ನು ಈಡೇರಿಸಿದಾಗ ಸಾಧನೆ ಸಾಧ್ಯ. ಬೇರೊಬ್ಬರ ಮೇಲೆ ಅವಲಂಭನೆಯಾಗಬಾರದು, ಅಲೆಗಳ ರೀತಿ ಮುಂದಕ್ಕೆ ಹೋಗಬೇಕು ಹೊರತು ಹಿಂದಕ್ಕೆ ಬರಬಾರದು. ಜೀವನದಲ್ಲಿ ನೌತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಚಾರ್ಯ ಸಲೀಂ, ಮುಖ್ಯಶಿಕ್ಷಕಿ ನಾಜೀಯ ಸುಲ್ತಾನ ಮತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net