ಬೋನಿಗೆ ಬಿದ್ದ ಕರಡಿ

14 HANUR 3
Published on


ಚಾಮರಾಜನಗರ : ಹನೂರು ತಾಲೂಕಿನ ಅಜ್ಜೀಪುರ ಭಾಗದಲ್ಲಿ ಉಪಟಳ ನೀಡುತ್ತ ಆತಂಕ ಮೂಡಿಸಿದ್ದ ಕರಡಿ ಬುಧವಾರ ಬೋನಿನಲ್ಲಿ ಸೆರೆಯಾಗಿದೆ.
ಕಳೆದ ವಾರ ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕರಡಿ ವಸ್ತುಗಳನ್ನು ಹಾನಿಗೊಳಿಸಿತ್ತು. ಡಿ.9 ರಂದು ಅಜ್ಜೀಪುರ ಗ್ರಾಮದ ಶಿವಶಕ್ತಿ ಬಾರ್ ಸಮೀಪದಲ್ಲಿ 2 ಅಂಗಡಿಗಳ ಮೇಲೆ ದಾಳಿ ನಡೆಸಿ ತಿಂಡಿ, ತಿನಿಸು ಹಾಗೂ ಇನ್ನಿತರ ಪದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಂಗಡಿಯನ್ನು ಹಾನಿಗೊಳಿಸಿತ್ತು.


ಇದರಿಂದ ಭಯಗೊಂಡ ಗ್ರಾಮಸ್ಥರು ಕರಡಿಯನ್ನು ಸೆರೆ ಹಿಡಿದು ಬೇರೆಡೆ ಬಿಡುವಂತೆ ಒತ್ತಾಯಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರ್‌ಎಫ್‌ಒ ಪ್ರವೀಣ್ ಕರಡಿ ಸೆರೆ ಹಿಡಿಯುವ ಭರವಸೆ ನೀಡಿ, ಅಜ್ಜೀಪುರದ ಬಳಿ ಬೋನು ಇಟ್ಟಿದ್ದರು.


ಬುಧವಾರ ಕರಡು ಬೋನಿಗೆ ಸಿಲುಕಿರುವುದನ್ನು ಸ್ಥಳೀಯರು ಗಸ್ತಿನಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಡಿಸಿಎಫ್ ಡಾ.ಸಂತೋಷ್‌ಕುಮಾರ್, ಎಸಿಎಫ್ ಚಂದ್ರಶೇಖರಗೌಡ ಪಾಟೀಲ್ ಬೋನಿನಲ್ಲಿದ್ದ ಕರಡಿಯನ್ನು ಪರಿಶೀಲಿಸಿ, ಅದನ್ನು ಯಾಡಿಯರಳ್ಳಿ ಅರಣ್ಯ ಪ್ರದೇಶಕ್ಕೆ ಒಯ್ದು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net