ಬಿಕಾಂ ಪ್ರಶ್ನೆ ಪತ್ರಿಕೆ ಲೀಕ್​, ಇಂದು ನಡೆಯಬೇಕಿದ್ದ ಎಕ್ಸಾಂ ರದ್ದು

gulbarga vv photo
Published on

ರಾಯಚೂರು: ಬಿಕಾಂ ಐದನೇ ಸೆಮಿಸ್ಟರ್​ನ ಲೆಕ್ಕಪತ್ರ ನಿರ್ವಹಣೆ ಪ್ರಶ್ನೆಪತ್ರಿಕೆಯು ಪರೀಕ್ಷೆಗೂ ಮುನ್ನವೇ ಬಹಿರಂಗವಾಗಿದೆ. ಪರಿಣಾಮ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿ ಗುಲ್ಬರ್ಗಾ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಗುರುವಾರ ಮಧ್ಯಾಹ್ನ 2ಕ್ಕೆ ಪರೀಕ್ಷೆ ಆರಂಭವಾಗಬೇಕಾಗಿತ್ತು. ಆದರೆ, ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎನ್ನುವ ದೂರು ಕೇಳಿ ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಪ್ರಶ್ನೆಪತ್ರಿಕೆ ಬಹಿರಂಗ ಆಗಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ವಿವಿ ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಕಟ್ಟಿ ಮಧ್ಯಾಹ್ನ 2ಕ್ಕೆ ನಡೆಯಬೇಕಾಗಿದ್ದ ಲೆಕ್ಕಪತ್ರ ನಿರ್ವಹಣೆ ಪರೀಕ್ಷೆಯನ್ನು ಮುಂದೂಡಿದರು. ಉಳಿದ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ. ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವ ಕುರಿತು ತನಿಖೆ ನಡೆಸುವ ನಿಟ್ಟಿನಲ್ಲಿ ಸೈಬರ್​ ಕೆಮ್​ ವಿಭಾಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಲೆಕ್ಕಪತ್ರ ನಿರ್ವಹಣೆ ವಿಷಯದ ಪರೀಕ್ಷೆಗೆ ಶೀಘ್ರವೇ ಬೇರೆ ದಿನಾಂಕ ನಿಗದಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net