ರೇಖಾ ಕದಿರೇಶ್​ ಕೊಲೆ: ಮತ್ತೆ ಮೂವರ ಬಂಧನ, ಹತ್ಯೆ ವೇಳೆ ಒಬ್ಬೊಬ್ಬರೂ ಒಂದೊಂದು ಕೃತ್ಯವೆಸಗಿದ್ದರು...

rekha kadiresh
Published on

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣ ಸಂಬಂಧ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

ನಿನ್ನೆ ಬೆಳಗ್ಗೆ ರೇಖಾರ ಸಹಚರರಾದ ಪೀಟರ್​ ಮತ್ತು ಸೂರ್ಯನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಇದೀಗ ಸ್ಟೆಪನ್​, ಅಜಯ್​, ಪುರುಷೋತ್ತಮ್​ ಎಂಬುವವರನ್ನು ಬಂಧಿಸಲಾಗಿದೆ.

ಕರೊನಾ ಹಿನ್ನೆಲೆ ಬಡ ಜನರಿಗೆ ತನ್ನ ಕಚೇರಿ ಬಳಿ ರೇಖಾ ಊಟ ವಿತರಿಸುತ್ತಿರುವಾಗಲೇ ಅಲ್ಲಿಗೆ ಬಂದ ದುಷ್ಕರ್ಮಿಗಳು ಗುರುವಾರ ಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪೈಕಿ ಪೀಟರ್​ ಎಂಬಾತ ರೇಖಾಗೆ ಮುಂಭಾಗದಿಂದ ಚಿಚ್ಚಿದರೆ, ಸೂರ್ಯ ಎಂಬಾತ ಹಿಂಬದಿಯಿಂದ ಚಿಚ್ಚಿದ್ದ. ಸ್ಟೆಫನ್​ ಮತ್ತು ಅಜಯ್​ ಎಂಬುವವರು ಹಲ್ಲೆ ನಡೆಸುವ ಸಮಯದಲ್ಲಿ ಯಾರಾದರೂ ತಡೆಯಲು ಬಂದಲ್ಲಿ ಗಾರ್ಡ್ ಮಾಡುತ್ತಿದ್ದರು. ಇನ್ನು ಹಲ್ಲೆ ನಡೆಸುವ ಮೊದಲು ರೇಖಾರ ಕಚೇರಿ ಬಳಿಯ ಸಿಸಿ ಕ್ಯಾಮರಾವನ್ನು ತಿರುಗಿಸಿ ಮತ್ತು ಹಲ್ಲೆ ನಡೆಸುವ ಸಮಯದಲ್ಲಿ ವಾಚ್ ಮಾಡಿದ್ದಾನೆ ಪುರುಷೋತ್ತಮ್​ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net