ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಶುರು: ಸಿದ್ದು- ಡಿಕೆಶಿ ಕೈ ಹಿಡಿದು ನಗಾರಿ ಬಾರಿಸಿದ ರಾಹುಲ್ ಗಾಂಧಿ

bharat jodo yatre gundlupete
Published on

ಚಾಮರಾಜನಗರ: ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಗುಂಡ್ಲುಪೇಟೆ ಪಣ್ಣಣದಲ್ಲಿ ಏರ್ಪಡಿಸಿದ್ದ ಬೃಹತ್​ ವೇದಿಕೆ ಕಾರ್ಯಕ್ರಮಕ್ಕ ಆಗಮಿಸಿದ ರಾಹುಲ್​ಗಾಂಧಿ ನಗಾರಿ ಬಾರಿಸುವ ಮೂಲಕ ರಾಜ್ಯದಲ್ಲಿ ನಡೆಯಲಿರುವ 21 ದಿಗಳ ಯಾತ್ರಗೆ ಚಾಲನೆ ನೀಡಿದರು.

ವೇದಿಕೆಯಲ್ಲಿ ರಾಹುಲ್​ಗಾಂಧಿ ಅವರ ಎಡ-ಬಲ ಭಾಗದಲ್ಲಿ ನಿಂತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಸಾಥ್​ ಕೊಟ್ಟರು. ಈ ವೇಳೆ ಸಿದ್ದು- ಡಿಕೆಶಿ ಅವರಿಬ್ಬರ ಕೈ ಹಿಡಿದು ರಾಹುಲ್​ ಗಾಂಧಿ ನಗಾರಿ ಬಾರಿಸಿ ಇವರಿಬ್ಬರೂ ಒಂದೇ. ಬಣ ರಾಜಕೀಯ ಇಲ್ಲ ಎಂದು ಸಂದೇಶ ಸಾರಿದರು. ಸಿದ್ದರಾಮೋತ್ಸವ ವೇದಿಕೆಯಲ್ಲಿ ರಾಹುಲ್​ ಕೈ ಸನ್ನೆ ಮೇರೆಗೆ ಸಿದ್ದು ಮತ್ತು ಡಿಕೆಶಿ ಅವರಿಬ್ಬರೂ ಪರಸ್ಪರ ಅಪ್ಪಿಕೊಂಡಿದ್ದನ್ನು ಸ್ಮರಿಸಬಹುದು.

ಇನ್ನು ವೇದಿಕೆ ಆಗಮಿಸಿದ ಸಾಹಿತಿ ದೇವನೂರು ಮಹದೇವ ಅವರ ನೇತೃತ್ವದ ತಂಡ ರಾಹುಲ್ ಗಾಂಧಿಗೆ ಸಂವಿಧಾನದ ಪ್ರಿಯಾಂಬಲ್ ನೀಡಿ ಶುಭ ಹಾರೈಸಿದರು. ಬಳಿಕ ರಾಹುಲ್​ಗಾಂಧಿ ನೇತೃತ್ವದಲ್ಲಿ ಸಹಸ್ರಾರು ಜನರು ಪಾದಯಾತ್ರೆ ಹೊರಟಿದ್ದಾರೆ. ದಾರಿಯುದ್ದಕ್ಕೂ ಜಾನಪದ ಕಲಾತಂಡಗಳು ಯಾತ್ರೆಗೆ ಮೆರುಗು ನೀಡುತ್ತಿವೆ. ಕಾರ್ಯಕರ್ತರು ಕಾಂಗ್ರೆಸ್​ ಪರ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net