ಮಕ್ಕಳ ಡೇ ಕೇರ್​ ಕೇಂದ್ರಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ ಮಾಜಿ ಪೊಲೀಸ್​ ಅಧಿಕಾರಿ! 22 ಮಕ್ಕಳು ಸೇರಿ 35 ಜನರ ಸಾವು

31-killed-in-mass-shooting-at-thailand
Published on

ಥಾಯ್ಲೆಂಡ್​: ಮಕ್ಕಳ ಡೇ ಕೇರ್ ಕೇಂದ್ರದ ಮೇಲೆ ಮಾಜಿ ಪೊಲೀಸ್​ ಅಧಿಕಾರಿಯೊಬ್ಬ ಗುಂಡಿನ ದಾಳಿ ನಡೆಸಿ, 22 ಮಕ್ಕಳು ಸೇರಿದಂತೆ 35 ಜನರನ್ನು ಕೊಂದ ಭೀಕರ ಘಟನೆ ಥಾಯ್ಲೆಂಡ್​​ನಲ್ಲಿ ನಡೆದಿದೆ.

ಗುರುವಾರ ಮಧ್ಯಾಹ್ನ ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದ ನೊಂಗ್ಬುವಾ ಲ್ಯಾಂಫು ಪಟ್ಟಣದ ಮಧ್ಯಭಾಗದಲ್ಲಿರುವ ಮಕ್ಕಳ ಡೇ ಕೇರ್​ ಕೇಂದ್ರಕ್ಕೆ ಬಂದೂಕು ಹಿಡಿದು ನುಗ್ಗಿದ ಪನ್ಯಾ ಖಮ್ರಾಬ್ ಎಂಬಾತ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಸಾಮೂಹಿಕವಾಗಿ 22 ಮಕ್ಕಳು ಸೇರಿದಂತೆ ಶಿಕ್ಷಕರು-ಸಿಬ್ಬಂದಿ ಸೇರಿ 35 ಜನರನ್ನು ಕೊಂದಿದ್ದಾನೆ. ಬಳಿಕ ಆರೋಪಿಯೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪನ್ಯಾ ಖಮ್ರಾಬ್​ನ ಗುಂಡಿನ ದಾಳಿಯಲ್ಲಿ ಈತನ ಹೆಂಡತಿ, ಮಗು ಕೂಡ ಮೃತಪಟ್ಟಿದ್ದಾರೆ. ಕಳೆದ ವರ್ಷ ಈತ ಪೊಲೀಸ್ ಕೆಲಸ ಬಿಟ್ಟು ಹೊರ ಬಂದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net