ಹಿರಿಯ ವಕೀಲ, ಸುಪ್ರೀಂಕೋರ್ಟ್​ ಎಎಸ್​ಜಿ ರೂಪಿಂದರ್​ ಸಿಂಗ್​ ಸೂರಿ ನಿಧನ

Rupinder Singh Suri
Published on

ನವದೆಹಲಿ: ಹಿರಿಯ ವಕೀಲ, ಸುಪ್ರೀಂಕೋರ್ಟ್​ನ ಹೆಚ್ಚುವರಿ ಸಾಲಿಸಿಟರ್​ ಜನರಲ್​(ಎಎಸ್​ಜಿ) ರೂಪಿಂದರ್​ ಸಿಂಗ್​ ಸೂರಿ ಅವರು ಇಂದು(ಸೋಮವಾರ) ಬೆಳಗ್ಗೆ ನಿಧನರಾದರು.

ಮೃತರು ಪತ್ನಿ ಗುರ್ವಿಂದ್​ ಸೂರಿ ಮತ್ತು ಪುತ್ರಿಯರಾದ ಸುರುಚಿ ಹಾಗೂ ಸಿಮರ್​ ಅವರನ್ನು ಅಗಲಿದ್ದಾರೆ. ಇವರೂ ಕೂಡ ವಕೀಲರಾಗಿದ್ದಾರೆ.

2009ರಲ್ಲಿ ಸುಪ್ರೀಂ ಕೋರ್ಟ್​ನ ಹಿರಿಯ ವಕೀಲರಾಗಿ ನೇಮಕಗೊಂಡಿದ್ದ ರೂಪಿಂದರ್​ ಸಿಂಗ್​ ಸೂರಿ ಅವರನ್ನ 2020ರ ಜೂನ್​ನಲ್ಲಿ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಅನ್ನಾಗಿ ನೇಮಿಸಲಾಗಿತ್ತು. ಸುಪ್ರೀಂಕೋರ್ಟ್​ ಬಾರ್​ ಅಸೋಸಿಯೇಷನ್​ ಮತ್ತು ಸುಪ್ರೀಂ ಕೋರ್ಟ್​ ಅಡ್ವೀಕೇಟ್ಸ್​ ಆನ್​ ರೆಕಾರ್ಡ್​ ಅಸೋಸಿಯೇಷನ್​ ಅಧ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ರೂಪಿಂದರ್​ ಸಿಂಗ್​ ಸೂರಿ ಅವರು ಸುಮಾರು 15 ವರ್ಷ ಪಂಜಾಬ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net