ಮೆಡಿಕಲ್​ ಕೋರ್ಸ್​ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

KEA-logo
Published on

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) 2021-22ನೇ ಶೈಕ್ಷಣಿಕ ಸಾಲಿಗೆ ಎಂಎಸ್ಸಿ, ನರ್ಸಿಂಗ್​, ಮಾಸ್ಟರ್​ ಆಫ್​​ ಫಿಜಿಯೋಥೆರಪಿ, ಎಂ.ಫಾರ್ಮ ಮತ್ತು ಫಾರ್ಮ-ಡಿ ಸ್ನಾತಕೋತ್ತರ ಕೋರ್ಸ್​ಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಕೆಇಎ ವೆಬ್​ಸೈಟ್​ಗೆ http://kea.kar.nic.in ಭೇಟಿ ನೀಡಿ ಫೆ.5ರವರೆಗೆ ಅರ್ಜಿ ಸಲ್ಲಿಸಬಹುದು. ಪಿಜಿ ಪರೀಕ್ಷೆಯು ಫೆ.20ರ ಬೆಳಗ್ಗೆ 10.30ರಿಂದ 12 ಗಂಟೆ ವರೆಗೆ ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ.

ಪಿಜಿ ವೈದ್ಯಕೀಯ- ಡಿಎನ್​ಬಿ ಸೀಟು ಹಂಚಿಕೆ ಫಲಿತಾಂಶ: 2021ನೇ ಸಾಲಿನ ಪಿಜಿ ವೈದ್ಯಕೀಯ ಹಾಗೂ ಡಿಎನ್​ಬಿ ಕೋರ್ಸ್​ಗಳ ಪ್ರವೇಶಾತಿಗೆ ಸಂಬಂಧಿಸಿ ಅಣುಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಿದೆ. ಜ.28 ರಂದು ಮಧ್ಯಾಹ್ನ 2 ಗಂಟೆಗೆ ನೈಜ ಸೀಟು ಹಂಚಿಕೆಯ ಓಲಿತಾಂಶ ಪ್ರಕಟವಾಗಲಿದೆ. ಮಾಹಿತಿಗೆ ಪ್ರಾಧಿಕಾರದ ವೆಬ್​ಸೈಟ್​ http://kea.kar.nic.in ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net