

ಬೆಂಗಳೂರು: ಪರೀಕ್ಷೆ ಮುಗಿದ ಒಂದೇ ಗಂಟೆಯಲ್ಲಿ ಫಲಿತಾಂಶ ನೀಡುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ದಾಖಲೆ ನಿರ್ಮಿಸಿದೆ.
ಬೆಂಗಳೂರು ವಿವಿ ವ್ಯಾಪ್ತಿಯಲ್ಲಿರುವ ಯುವಿಸಿಇ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಕೋರ್ಸ್ನಲ್ಲಿ 72 ವಿದ್ಯಾಥಿರ್ಗಳ ಪಿಎಚ್.ಡಿ ಕೋರ್ಸ್ ವರ್ಕ್ ಪರೀಕ್ಷೆಯು ಗುರುವಾರ ಮುಕ್ತಾಯವಾಗಿದ್ದು, ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ ಫಲಿತಾಂಶ ನೀಡಿದೆ.
ಈವರೆಗೆ ಕೇವಲ ಒಂದು ಗಂಟೆಯಲ್ಲಿ ಫಲಿತಾಂಶ ನೀಡಿದ್ದೇ ಇಲ್ಲ. ನಾವು ನೀಡಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೂ ಖುಷಿಯಾಗಿದೆ ಎಂದು ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.