ಆಂಧ್ರಕ್ಕೆ ಒಂದೇ ರಾಜಧಾನಿ, ಅದು ಅಮರಾವತಿ: ಸಿಎಂ ಜಗನ್​ ಮೋಹನ್​ ರೆಡ್ಡಿ ಘೋಷಣೆ

ಮಾಜಿ ಸಿಎಂ ವೈಎಸ್ Tirupati Laddu Row ಜಗನ್ ಶನಿವಾರ(ಸೆ.28) ಪೂಜೆ ನೆರವೇರಿಸಲು ಮುಂದಾಗಿದ್ದಾರೆ
ಜಗನ್​
Published on

ವಿಜಯವಾಡ: ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಎಂದು ಸಿಎಂ ಜಗನ್​ ಮೋಹನ್​ ರೆಡ್ಡಿ ಸೋಮವಾರ ಘೋಷಿಸಿದ್ದಾರೆ.

ಆಂಧ್ರಕ್ಕೆ ಮೂರು ರಾಜಧಾನಿಗಳ ನಿರ್ಮಾಣ ಕುರಿತು ಸೃಷ್ಟಿಯಾಗಿದ್ದ ವಿವಾದದ ನಡುವೆಯೇ ರಾಜ್ಯಕ್ಕೊಂದೇ ರಾಜಧಾನಿ. ಅದು ಅಮರಾವತಿ ಎಂದು ಜಗನ್​ ಮೋಹನ್​ ರೆಡ್ಡಿ ಹೇಳಿದ್ದಾರೆ. ಈ ಘೋಷಣೆಯೊಂದಿಗೆ ಮೂರು ರಾಜಧಾನಿ ಮಸೂದೆಯನ್ನ ಹಿಂಪಡೆದು ಒಂದೇ ಒಂದು ರಾಜಧಾನಿ ಬಗ್ಗೆ ಹೈಕೋರ್ಟ್​ಗೆ ಮಾಹಿತಿ ನೀಡಲು ರಾಜ್ಯ ಸಂಪುಟ ನಿರ್ಧರಿಸಿದೆ.

ಅಮರಾವತಿ-ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ- ಕಾಯರ್ಕಾರಿ ರಾಜಧಾನಿ, ಕರ್ನೂಲ್-​ ನ್ಯಾಯಾಂಗ ರಾಜಧಾನಿ ಎಂದು ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಸರ್ಕಾರ ಈ ಹಿಂದೆ ಪ್ರಸ್ತಾಪಿಸಿತ್ತು. ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳ ವಿಚಾರ ಆಂಧ್ರದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು. ವಿಪಕ್ಷಗಳು ಮತ್ತು ಅಮರಾವತಿ ಭಾಗದ ರೈತರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಮರಾವತಿ ಭಾಗದ ರೈತರು ಇದನ್ನು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ರಾಜಧಾನಿ ಅಭಿವೃದ್ಧಿ ಕಾರ್ಯಕ್ಕಾಗಿ ಅಮರಾವತಿ ಭಾಗದಲ್ಲಿ ರೈತರು ಭೂಮಿ ಕೊಟ್ಟಿದ್ದರು. ಆ ರೈತರೆಲ್ಲರೂ ಅಮರಾವತಿಯೇ ರಾಜಧಾನಿ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಇದೀಗ ರಾಜ್ಯಕ್ಕೆ ಒಂದೇ ರಾಜಧಾನಿ. ಅದುವೆ ಅಮರಾವತಿ ಎಂದು ಜಗನ್​ಮೋಹನ್​ ರೆಡ್ಡಿ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net