ಅಂಗನವಾಡಿ ಕಾರ್ಯಕರ್ತೆಯ ಕತ್ತು ಕೊಯ್ದು ಕೊಲೆ

New Project(43)
Published on

ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇಂತಹ ಅಮಾನುಷ ಘಟನೆ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಎಸ್.ವೆಂಕಟಲಕ್ಷ್ಮಮ್ಮ ಮೃತ ದುರ್ದೈವಿ. ರಕ್ತಸಿಕ್ತವಾಗಿ ಬಿದ್ದಿದ್ದ ಅಂಗನವಾಡಿ ಕಾರ್ಯಕರ್ತೆಯ ಶವ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮಂಗಳವಾರ ಬೆಳಗ್ಗೆ ವಿದ್ಯುತ್ ಬಿಲ್‌ ಸ್ವೀಕರಿಸಿದ ಬಳಿಕ ಮನೆಯ ಒಳಗೆ ಹೋದ ವೆಂಕಟಲಕ್ಷ್ಮಮ್ಮ, ಸಂಜೆಯಾದರೂ ಹೊರ ಬಂದಿರಲಿಲ್ಲ. ಅನುಮಾನಗೊಂಡು ಒಳಹೋದಾಗ ಕೊಲೆಯಾಗಿರುವುದು ಗೊತ್ತಾಗಿದೆ. ವೆಂಕಟಲಕ್ಷ್ಮಮ್ಮಗೆ ಮದುವೆಯಾಗಿದ್ದು, ಹಲವು ವರ್ಷಗಳ‌ ಹಿಂದೆಯೇ ಇವರನ್ನು ಬಿಟ್ಟು ಗಂಡ ಹೋಗಿದ್ದಾರೆ. ಒಂಟಿಯಾಗಿ ನಾಯನಹಳ್ಳಿ ಗ್ರಾಮದಲ್ಲಿ ವಾಸವಿದ್ದರು. ದುಷ್ಕರ್ಮಿಗಳು ನಿನ್ನೆ ಮನೆಗೆ ನುಗ್ಗಿ ಆಕೆಯನ್ನ ಕೊಂದು ಮನೆಯಲ್ಲಿ ಚಿನ್ನ-ನಗದು ದರೋಡೆ ಮಾಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net