

ಫ್ಲೋರಿಡಾ: 2021ನೇ ಸಾಲಿನ ವಿಶ್ವಸುಂದರಿ ಕೀರಿಟ ಮೆಕ್ಸಿಕೊದ ಆಂಡ್ರಿಯಾ ಮೆಜಾ(26) ಅವರ ಮುಡಿಗೇರಿದೆ.
ಅಮೆರಿಕದ ಫ್ಲೋರಿಡಾದಲ್ಲಿ ಭಾನುವಾರ ನಡೆದ 'ಮಿಸ್ ಯೂನಿವರ್ಸ್-2021' ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವರ್ಷದ ಆಂಡ್ರಿಯಾ ಮೆಜಾ ಆಯ್ಕೆಯಾಗುವ ಮೂಲಕ 69ನೇ ಆವೃತ್ತಿಯ 'ಮಿಸ್ ಯೂನಿವರ್ಸ್' ಕಿರೀಟ ತೊಟ್ಟು ಸಂಭ್ರಮಿಸಿದರು.
69ನೇ 'ಮಿಸ್ ಯೂನಿವರ್ಸ್'ನ ಅಂತಿನ ಸ್ಪರ್ಧೆಯಲ್ಲಿ ಜಗತ್ತಿನ ವಿವಿಧ ಭಾಗಗಳಿಂದ 70ಕ್ಕೂ ಹೆಚ್ಚಿ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇವರೆಲ್ಲರನ್ನೂ ಹಿಂದಿಕ್ಕಿ ಆಂಡ್ರಿಯಾ ಮೆಜಾ ಗೆದ್ದರು. ಬ್ರೆಜಿಲ್‌ನ ಜೂಲಿಯಾ ಗಾಮಾ ಮೊದಲ ರನ್ನರ್ ಅಪ್, ಪೆರುವಿನ ಜಾನಿಕ್ ಮಾಸೆಟಾ ಎರಡನೇ ರನ್ನರ್ ಅಪ್, ಭಾರತವನ್ನು ಪ್ರತಿನಿಧಿಸಿದ್ದ 22 ವರ್ಷದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಅವರು ಮೂರನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.
ಅಂತಿಮ ಸುತ್ತಿನಲ್ಲಿ ಆಂಡ್ರಿಯಾ ಮೆಜಾ ಅವರಿಗೆ 'ನೀವು ದೇಶದ ಲೀಡರ್ ಆಗಿದ್ದರೆ ಕರೊನಾ ನಿಯಂತ್ರಿಸಲು ಏನು ಮಾಡುತ್ತಿದ್ದಿರಿ?' ಎಂಬ ಪ್ರಶ್ನೆಯನ್ನ ಕೇಳಲಾಗಿತ್ತು. ಇದಕ್ಕೆ ದಿಟ್ಟತನದಿಂದ ಉತ್ತರಿಸಿ ಆಂಡ್ರಿಯಾ, ಕರೊನಾ ಸೋಂಕು ನಿಯಂತ್ರಿಸಲು ಇರುವ ಬ್ರಹ್ಮಾಸ್ತ್ರ ಅಂದ್ರೆ ಲಾಕ್ಡೌನ್. ಆರಂಭದಲ್ಲೇ ಲಾಕ್ಡೌನ್ ಮಾಡುತ್ತಿದ್ದೆ. ನನಗೆ ಜನರ ಪ್ರಾಣ ಉಳಿಸುವುದೇ ಮೊದಲ ಆದ್ಯತೆ. ಈಗಾಗಾಲೇ ಸಾಕಷ್ಟು ಜನರ ಪ್ರಾಣ ಕಳೆದುಕೊಂಡಿದ್ದೇವೆ. ಮತ್ತಷ್ಟು ಸಾವು ನೋವು ಸಂಭವಿಸುವುದನ್ನ ತಡೆಯಬೇಕಂದ್ರೆ ಲಾಕ್ಡೌನ್ ಅನಿವಾರ್ಯ ಎಂದು ಉತ್ತರಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಮಿಸ್ ಯೂನಿವರ್ಸಲ್ ವಿಜೇತೆ ಮೂಲತಃ ಸಾಫ್ಟ್ವೇರ್ ಇಂಜಿನಿಯರ್.