ಆಂಬುಲೆನ್ಸ್​-ಸ್ಕೂಟಿ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ಸಾವು

accident
Published on

ಚಿತ್ರದುರ್ಗ: ಆಂಬುಲೆನ್ಸ್​ ಮತ್ತು ಸ್ಕೂಟಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಚಿತ್ರದುರ್ಗ ಹೊರವಲಯದ ಈರಜ್ಜನಹಟ್ಟಿ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.

ಚಿತ್ರದುರ್ಗದಿಂದ ಹೊಳಲ್ಕೆರೆಯತ್ತ ಆಂಬುಲೆನ್ಸ್‌ ಹೊರಟಿತ್ತು. ಹೊಳಲ್ಕೆರೆಯಿಂದ ಚಿತ್ರದುರ್ಗದತ್ತ ಸ್ಕೂಟಿ ಬರುತ್ತಿತ್ತು. ಹೊಳಲ್ಕೆರೆ ರಸ್ತೆಯ ತಿರುಮಲ ಡಾಬಾ ಬಳಿ ಈ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಕೂಟಿಯಲ್ಲಿ ಕುಳಿತು ತ್ರಿಬಲ್​ ರೈಡಿಂಗ್​ನಲ್ಲಿ ಬರುತ್ತಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಅಪಘಾತ ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣೆ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಪಘಾತದ ರಭಸಕ್ಕೆ ಸ್ಕೂಟಿ ನಜ್ಜುಗುಜ್ಜಾಗಿತ್ತು. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೃತರ ಹೆಸರು, ಅವರು ಯಾವ ಊರಿನವರು ಎಂಬ ಮಾಹಿತಿ ಬಗ್ಗೆ ಪೊಲೀಸರು ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net