ಗಂಡನಿಗೆ ಡಿವೋರ್ಸ್‌ ಕೊಟ್ಟು ನಾಯಿ ಜತೆ ಮದ್ವೆ ಆದ್ಲು! ಇವಳ ಸ್ಟೋರಿ ಕೇಳಿದ್ರೆ ಶಾಕ್​ ಆಗ್ತೀರಿ

New Project (25)
Published on

ಲಂಡನ್​: ಪ್ರತಿಯೊಬ್ಬರಿಗೂ ತನ್ನ ಮದುವೆ ಬಗ್ಗೆ ನೂರಾರು ಕನಸುಗಳಿರುತ್ತೆ. ಈ ವಿಚಾರದಲ್ಲಿ ಯುವತಿಯರ ಆಸೆ-ಆಕಾಂಕ್ಷೆಗಳಿಗೆ ಮಿತಿಯೇ ಇಲ್ಲ. ತಾನು ಮದುವೆ ಆಗುವ ಹುಡುಗ ಹಾಗಿರಬೇಕು, ಹೀಗಿರಬೇಕು... ಎಂದು ದೇವರಿಗೆ ಹರಿಕೆ ಕಟ್ಟಿದ್ದನ್ನೂ ನೋಡ್ತೀವಿ. ಆದರೆ, ಇಲ್ಲೊಬ್ಬ ಮಹಿಳೆ ತಾನು ಸಾಕಿದ್ದ ನಾಯಿಯನ್ನೇ ಮದ್ವೆ ಆಗಿದ್ದಾಳೆ.

ಹೌದು, ಇದು ವಿಚಿತ್ರ ಎನ್ನಿಸಿದರೂ ಸತ್ಯ. ನಾಯಿಯನ್ನು ಮದುವೆ ಆದ ಮಹಿಳೆ ಹೆಸರು ಅಮಂಡಾ ರಾಡ್ಜರ್ಸ್​. ಇದಕ್ಕೂ ಮೊದಲು ವ್ಯಕ್ತಿಯೊಬ್ಬರ ಜತೆ ಅಮಂಡಾ ರಾಡ್ಜರ್ಸ್​ಳ ಮದುವೆ ಆಗಿತ್ತು. ಇದೀಗ ಗಂಡನಿಗೆ ಡಿವೋರ್ಸ್​ ಕೊಟ್ಟು ನಾಯಿ ಜತೆ ಕ್ರೈಸ್ತ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದಾಳೆ. ಸಂಬಂಧಿಕರು-ಸ್ನೇಹಿತರನ್ನೂ ಮದುವೆಗೆ ಆಹ್ವಾನಿಸಿದ್ದಳು. 200ಕ್ಕೂ ಹೆಚ್ಚು ಮಂದಿ ಈ ಮದ್ವೆಯಲ್ಲಿ ಪಾಲ್ಗೊಂಡು ಮಹಿಳೆ ಮತ್ತು ನಾಯಿಗೆ ಶುಭಕೋರಿದ್ದಾರೆ. ಅಂದಹಾಗೆ ಇಂತಹ ವಿಚಿತ್ರ ಮದುವೆ ಲಂಡನ್​ನ ಕ್ರಯೋಷಿಯಾದಲ್ಲಿ ನಡೆದಿದೆ.

ನಾಯಿ ಜತೆ ಮದುವೆ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಅಮಂಡಾ ರಾಡ್ಜರ್ಸ್​, ನಾನು ನನ್ನ ಸಂಗಾತಿಯಿಂದ ನಿರೀಕ್ಷಿಸಿದ್ದನ್ನು ಪಡೆಯಲು ಸಾಧ್ಯವಾಗಲಿಲ್ಲ. ನನ್ನ ಮುದ್ದಿನ ನಾಯಿ ಶಬಾ ಯಾವಾಗಲೂ ನನ್ನ ಸಂತೋಷವನ್ನೇ ಬಯಸುತ್ತೆ. ಹೀಗಾಗಿ ನಾನು ನನ್ನ ಮದುವೆ ವಿಷಯವನ್ನ ಅದರ ಬಳಿ ಹೇಳಿಕೊಂಡೆ. ಬಾಲ ಅಲ್ಲಾಡಿಸಿ ನಾಯಿ ಒಪ್ಪಿಗೆ ಕೊಟ್ಟಿತು ಎಂದಿದ್ದಾರೆ. ಒಟ್ಟಿನಲ್ಲಿ ಅಮಂಡಾ ರಾಡ್ಜರ್ಸ್​ ನಾಯಿ ಜತೆ ಮದುವೆ ಆಗುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ನಾಯಿ ಜತೆ 18 ವರ್ಷದ ಯುವತಿಯ ಮದುವೆಯೂ ಆಗಿತ್ತು: ಈ ಹಿಂದೆ ಭಾರತದಲ್ಲಿಯೇ 18 ವರ್ಷದ ಯುವತಿಯೊಬ್ಬಳ ಮದುವೆ ಕೂಡ ನಾಯಿ ಜತೆ ಆಗಿತ್ತು. ಆದರೆ ಈ ಮದುವೆ ಆಗಿತ್ತು ಯುವತಿ ಜಾತಕದಲ್ಲಿದ್ದ ದೋಷವನ್ನು ಸರಿ ಮಾಡಿಕೊಳ್ಳಲು. ಜಾರ್ಖಂಡ್ ರಾಜ್ಯದ ಮಂಗಳಿಮುಂಡ ಎಂಬಾಕೆ ಮೊದಲು ಸಾಕು ನಾಯಿ ಜತೆ ಮದುವೆ ಮಾಡಿಕೊಂಡಿದ್ದಳು. ಬಳಿಕ ಯುವಕನೊಂದಿಗೆ ಸಪ್ತಪದಿ ತುಳಿದಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net