ತೆಲಂಗಾಣದಲ್ಲಿ ತರಬೇತಿ ವಿಮಾನ ಪತನ: ಮಹಿಳಾ ಪೈಲಟ್, ಟ್ರೈನಿ ಪೈಲಟ್ ದುರ್ಮರಣ

Aircraft Crash Nalgonda
Published on

ತೆಲಂಗಾಣ: ನಲ್ಗೊಂಡ ಜಿಲ್ಲೆಯಲ್ಲಿ ತರಬೇತಿನಿರತ ವಿಮಾನವೊಂದು ಪತನವಾಗಿದ್ದು, ಮಹಿಳಾ ಪೈಲಟ್​ ಮತ್ತು ತರಬೇತಿ ನಿರತ ಪೈಲಟ್​ ಇಬ್ಬರೂ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲದ ತುಂಗತ್ತುರಿ ಸಮೀಪ ವಿಮಾನವು ಕೆಳಕ್ಕೆ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡು ಉರಿದಿದೆ. ಸ್ಥಳದಲ್ಲೇ ಪೈಲಟ್ ಮತ್ತು ಟ್ರೈನಿ ಪೈಲಟ್ ಮೃತಪಟ್ಟಿದ್ದಾರೆ.

ವಿಮಾನ ಕೆಳಗೆ ಬಿದ್ದ ಶಬ್ಧಕ್ಕೆ ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ರೈತರು ಬೆಚ್ಚಿಬಿದ್ದಿದ್ದಾರೆ. ಏನಾಯ್ತೆಂದು ಶಬ್ಧ ಬಂದ ದಿಕ್ಕಿನತ್ತ ತಿರುಗಿ ನೋಡಿದ್ರೆ ದಟ್ಟ ಹೊಗೆ-ಬೆಂಕಿಯ ಜ್ವಾಲೆ ಕಂಡಿದ್ದು, ಸ್ಥಳಕ್ಕೆ ಹೋದಾಗ ವಿಮಾನ ಹೊತ್ತಿ ಉರಿಯುತ್ತಿದ್ದ, ಚೀರಾಟದ ಶಬ್ಧ ಕೇಳಿಸಿತು. ಕೆಲವೇ ಕ್ಷಣದಲ್ಲಿ ಚೀರಾಟ ನಿಂತಿತ್ತು ಎಂದು ರೈತರು ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net