

ಬೀಜಿಂಗ್: 133 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದಕ್ಷಿಣ ಚೀನಾದಲ್ಲಿ ಪತನಗೊಂಡಿದೆ.
ಚೀನಾ ಈಸ್ಟರ್ನ್ ಏರ್ಲೈನ್ಸ್ಗೆ ಸೇರಿದ ಬೋಯಿಂಗ್ ಜೆಟ್ 737 ವಿಮಾನವು ಗುವಾಂಗ್ಸಿ ಪ್ರದೇಶದಲ್ಲಿ ಸೋಮವಾರ ಪತನಗೊಂಡಿದೆ.
ವಿಮಾನವು ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ತೆರಳುತ್ತಿತ್ತು. ಮಾರ್ಗಮಧ್ಯೆ ಪತನಗೊಂಡ ವಿಮಾನ ಪರ್ವತದಲ್ಲಿ ಬಿದ್ದು ಧಗಧಗಿಸಿದೆ. ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿತ್ತು. ಪ್ರಯಾಣಿಕರ ಸ್ಥಿತಿ ಏನಾಗಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.