ಭಾರೀ ಸದ್ದಿನೊಂದಿಗೆ ಮತ್ತೆ ಕಂಪಿಸಿದ ಭೂಮಿ: ಕೊಡಗು-ದಕ್ಷಿಣ ಕನ್ನಡ ಗಡಿಯಲ್ಲಿ ನಿಲ್ಲದ ಆತಂಕ

earthquake
Published on

ಕೊಡಗು: ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ.

ಈ ಭಾಗದಲ್ಲಿ ಒಂದು ತಿಂಗಳಿಂದ ಪದೇಪದೆ ಭೂಕಂಪನ ಆಗುತ್ತಿದೆ. ಜತೆಗೆ ಮುಂಗಾರು ಮಳೆಯೂ ಹೆಚ್ಚಾಗಿದ್ದು, ರಸ್ತೆ ಕುಸಿತ, ಗುಡ್ಡ ಕುಸಿ, ಮನೆ ಹಾನಿ... ಹೀಗೆ ಒಂದಿಲ್ಲೊಂದು ಹಾನಿ ಸಂಭವಿಸುತ್ತಲೇ ಇದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಇಂದು(ಶುಕ್ರವಾರ) ಮತ್ತೆ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದ್ದು, ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಇಲಾಖೆಗಳಿಂದ ಹೊರಬಿದ್ದಿಲ್ಲ.

ಸತತ ಭೂಕಂಪನದಿಂದ ತತ್ತರಿಸಿರುವ ದಕ್ಷಿಣ ಕನ್ನಡ, ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಎಲ್ಲೆಲ್ಲಿ ಅನುಭವ?: ಚೆಂಬು, ಸಂಪಾಜೆ, ಗೂನಡ್ಕ, ಅರಂತೋಡು, ತೊಡಿಕಾನ ಮುಂತಾದೆಡೆ ಭೂಕಂಪನದ ಅನುಭವವಾಗಿದೆ.

ಯಾವ ಸಮಯದಲ್ಲಿ?: ಶುಕ್ರವಾರ ಬೆಳಗ್ಗೆ 10.09ರ ಸುಮಾರಿಗೆ ಭೂಮಿಯ ತಳಭಾಗದಿಂದ ಭಾರೀ ಶಬ್ದ ಕೇಳಿಸಿದೆ. ಅದಾದ ಬಳಿಕ ಭೂಮಿ ನಡುಗಿದೆ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ. ಈ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಭಾರೀ ಸದ್ದಿನೊಂದಿಗೆ ಹತ್ತಕ್ಕೂ ಹೆಚ್ಚು ಭಾರಿ ಭೂಕಂಪನದ ಅನುಭವವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net