

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸರು ಪಿಎಫ್ಐ ಸಂಘಟನೆಗೆ ಇಂದು ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ. ಏಕಕಾಲಕ್ಕೆ ರಾಜ್ಯಾದ್ಯಂತ ದಾಳಿ ಮಾಡಿ ಹಲವರನ್ನ ವಶಕ್ಕೆ ಪಡೆದು ಕಾನೂನು ಸುವ್ಯವಸ್ಥೆ ಕದಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ, ಕೆಲವರನ್ನು ಬಂಧಿಸಿದ್ದಾರೆ. ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಕೆಲ ಮಾಹಿತಿ ನೀಡಿದ್ದಾರೆ.
80 ಜನರನ್ನು ವಶಕ್ಕೆ ಪಡೆದಿದ್ದೇವೆ. ಡಾಕ್ಯುಮೆಂಟ್ ಸೀಜ್ ಮಾಡಿಲ್ಲ. ಎನ್ಐಎ ದಾಳಿಗೂ ಇದಕ್ಕೂ ಸಂಬಂಧ ಇಲ್ಲ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ದಾಳಿ ಮಾಡಿದ್ದೇವೆ. ಕರ್ನಾಟಕದಲ್ಲಿ ಲಾ ಆ್ಯಂಡ್ ಆರ್ಡರ್ ಕೆಡಿಸುವಂತಹವರ ಮೇಲೆ ದಾಳಿ ಮಾಡಲಾಗಿದೆ ಎಂದರು.
ಪಿಎಫ್ಐ ಹಾಗೂ ಎಸ್ಡಿಪಿಐ ಮುಖಂಡರನ್ನು ವಶಕ್ಕೆ ಪಡೆದಿದ್ದೇವೆ. ಅಂತಹವರಿಗೆ ಎರಡು ಬಾಂಡ್ ಕೊಡಬೇಕು. ಒಂದು ಅವರ ಮನೆಯವರು, ಇನ್ನೊಂದು ಬಾಂಡ್ ಅನ್ನು ಸರ್ಕಾರಿ ನೌಕರರು ಯಾರದಾರು ಅವರ ಪರವಾಗಿ ನೀಡಬೇಕು. ಆ ನಂತರ ಅವರನ್ನು ತಹಸೀಲ್ದಾರ್ ಅವರ ಮುಂದೆ ಕರೆದೊಯ್ಯಲಾಗತ್ತೆ. ಇದೀಗ ತನಿಖೆ ಹಂತದಲ್ಲಿದೆ. ಮುಂದೆ ಇನ್ಯಾರಾದರು ಅಕ್ರಮ ಎಸಗಿದ್ದಾರೆ ಅಂತ ಗೊತ್ತಾದ್ರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೀವಿ ಎಂದರು.