

ಚೆನ್ನೈ: ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿ ಬಲೆಗೆ ಬೀಳಿಸಿಕೊಂಡ ಯುವಕನೊಬ್ಬ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಆಕೆಗೆ ಮಾತ್ರೆ ನುಂಗಿಸಿ ಸಂಕಷ್ಟಕ್ಕೆ ಸಿಲುಕಿದ್ದಾನೆ.
ತಮಿಳುನಾಡಿನ ಪುದುಕ್ಕೊತ್ತೈ ಜಿಲ್ಲೆಯ ಸತ್ಯಮಂಗಳಂ ಸಮೀಪದ ನಿವಾಸಿ 31 ವರ್ಷದ ಯುವಕ ಸುರೇಶ್ ಎಂಬಾತ ಇದೇ ಊರಿನ ಶಾಲಾ ವಿದ್ಯಾರ್ಥಿನಿಯೊಬ್ಬಳ ಜತೆ ಸಲುಗೆ ಬೆಳೆಸಿಕೊಂಡಿದ್ದ. ನಂತರ ಆಕೆಯನ್ನು ಪುಸಲಾಯಿಸಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ.
ಬಾಲಕಿ ಗರ್ಭಿಣಿ ಆಗುವುದನ್ನ ತಡೆಯಲು ಆಕೆಗೆ ಬಲವಂತಾವಗಿ ಮಾತ್ರೆ ನುಂಗಿಸಿದ್ದ. ಪರಿಣಾಮ ಬಾಲಕಿ ಆರೋಗ್ಯ ತೀವ್ರ ಹದಗೆಟ್ಟಿತ್ತು. ವಿಚಾರ ತಿಳಿದ ಸಂತ್ರಸ್ತೆಯ ಪಾಲಕರು ಸುರೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ತನಿಖೆ ಬಳಿಕ ಸುರೇಶ್ ಕೃತ್ಯ ಸಾಬೀತಾಗಿದ್ದು, ಆತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.