ಹೃದಯಾಘಾತಕ್ಕೆ 6 ವರ್ಷದ ಪುಟ್ಟ ಬಾಲಕಿ ಬಲಿ! | Heart Attack

dk - 2025-07-07T212314.440
Published on

Heart Attack: 6 ವರ್ಷದ ಬಾಲಕಿ ಹೃದಯಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್​ನಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ತೆಲಂಗಾಣದ ಜನಗಾಂವ್​​ ಜಿಲ್ಲೆಯ ಕೊಟ್ಟಪಲ್ಲಿ ಗ್ರಾಮದ ನಿವಾಸಿಗಳಾದ ಗೋವಿಂದ್​​ ಮತ್ತು ಅನುಷಾ ದಂಪತಿಗಳ ಎರಡನೇ ಪುತ್ರಿ ಮಿಧುನ್​​(6)ಮೃತ ಬಾಲಕಿ. ದಂಪತಿಗಳು ಹೈದರಾಬಾದ್​ಗೆ ಕೆಲಸಕ್ಕೆಂದು ವಲಸೆ ಬಂದಿದ್ದಾರೆ.

ಶನಿವಾರ(ಜು.5) ರಾತ್ರಿ ಮಿಧುನ್​ಗೆ ಎದೆನೋವು ಮತ್ತು ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಗಾಬರಿಗೊಂಡ ದಂಪತಿಗಳು ರಾತ್ರಿಯೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವೈದ್ಯರ ಎಲ್ಲ ಪ್ರಯತ್ನದ ಹೊರತಾಗಿಯೂ ಮಗು ಮೃತಪಟ್ಟಿದೆ. ಬಳಿಕ ವೈದ್ಯರು ಹೃದಯಾಘಾತದಿಂದಲೇ ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ. ಈ ಘಟನೆಯೂ ಕುಟುಂಬವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net