ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ‌. ಅನುದಾನ: ಸಿಎಂ ಘೋಷಣೆ

kalyana karnataka
Published on

ಕಲಬುರಗಿ: ಕಲ್ಯಾಣ ಕರ್ನಾಟಕ ‌ಪ್ರದೇಶದ ಸಮಗ್ರ ಅಭಿವೃದ್ಧಿ ಸಲುವಾಗಿ ಮುಂದಿನ ಬಜೆಟ್​ನಲ್ಲಿ 5 ಸಾವಿರ ಕೋಟಿ ರೂ‌. ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಕಲ್ಯಾಣ ಕರ್ನಾಟಕ ಸ್ವಾತಂತ್ರ ಅಮೃತ‌ಮಹೋತ್ಸದ ಹಿನ್ನೆಲೆಯಲ್ಲಿ ವರ್ಷವಿಡೀ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ನಗರದ ಎನ್​.ವಿ.‌ ಮೈದಾನದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿ ಸಿಎಂ, ಹಿಂದೆ ಹೇಳಿದಂತೆ ಈ ವರ್ಷ 3000 ಕೋಟಿ ರೂ. ನೀಡಿದ್ದೇವೆ. ಈ ಸಲ ಹೆಚ್ಚು ಅನುದಾನ ನೀಡಿ ಜಲನಿಜ ಕಲ್ಯಾಣ ಮಾಡುವುದರ ಜತೆಗೆ ಜನ ಕಲ್ಯಾಣ ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.

ದುಡಿಮೆಯೇ ದೊಡ್ಡಪ್ಪ ಎಂಬುದನ್ನು ಅರಿತು ಎಲ್ಲರೂ ಕೆಲಸ ಮಾಡಬೇಕು. ಈ ಭಾಗವನ್ನು ಅಭಿವೃದ್ಧಿ ಮಾಡಬೇಕು ಎಂದು ಸಿಎಂ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net