ಇಂಜಿನಿಯರಿಂಗ್​ ವಿದ್ಯಾರ್ಥಿ ಜತೆ 38ರ ಮಹಿಳೆ​ ಪರಾರಿ!: ಮುಂದೇನಾಯ್ತು ಗೊತ್ತಾ? | Escaped

untitled-design-46-6880ca62bfea5
Published on

Escaped: ಇಂಜಿಯರಿಂಗ್​ ವಿದ್ಯಾರ್ಥಿ ಜತೆ ಅದೇ ಕಾಲೇಜಿನ 38 ವರ್ಷದ ಪ್ರಾಧ್ಯಾಪಕಿ ಪರಾರಿಯಾದ ಘಟನೆ ಆಂಧ್ರಪ್ರದೇಶದ ಚಿತ್ತೂರಿ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದೆ.

ಯುವಕನಿಗೆ 19 ವರ್ಷ, ಆತನ ಲಕ್ಚರ್​ಗೆ 38 ವರ್ಷ.. ಇಬ್ಬರು ಪ್ರೇಮದಲ್ಲಿ ಬಿದ್ದಿದ್ದಾರೆ. ತಮ್ಮ ಪ್ರೀತಿಗೆ ಕುಟುಂಬದವರು ಒಪ್ಪಲ್ಲ ಎಂದು ಭಾವಿಸಿ ಯಾರು ಕಾಣದ ಪ್ರದೇಶಕ್ಕೆ ಓಡಿ ಹೋಗಿ ಮದುವೆ ಮಾಡಿಕೊಳ್ಳಬೇಕು ಎನ್ನುಕೊಳ್ಳುವಷ್ಟರಲ್ಲಿ ವಿಧಿಯಾಟನೇ ಬೇರೆಯಾಗಿತ್ತು.

ಹೌದು, ಚಿತ್ತೂರು ಪ್ರದೇಶದ ಯುವಕ(19) ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್​ ಪದವಿ ಮಾಡುತ್ತಿದ್ದಾನೆ. ಅದೇ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿ(38) ಕೆಲಸ ಮಾಡುತ್ತಿದ್ದಾರೆ. ಆಕೆ ವಿವಾಹವಾಗಿದ್ದು, ಗಂಡನಿಂದ ವಿಚ್ಛೇದನ ಪಡೆದಿದ್ದಾಳೆ. ಈ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಕಾಲೇಜು ಸಮಯಲ್ಲಿ ಯುವಕನಿಗೆ ಮತ್ತು ಆಕೆಗೆ ಪರಿಚಯವಾಗಿ ಲವ್​ ಆಗಿದೆ. ಕಳೆದ ಮೂರು ದಿನಗಳಿಂದೆ ಅಂದುಕೊಂಡಂತೆ ಇಬ್ಬರು ಪರಾರಿಯಾಗಿದ್ದಾರೆ.

ಆದರೆ, ಯುವಕನ ಮನೆಯವರು ಯುವಕ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಕಾಲೇಜಿನಲ್ಲಿ ಯುವಕನ ಬಗ್ಗೆ ವಿಚಾರ ಮಾಡಿದಾಗ ಈ ಇಬ್ಬರ ಪ್ರೀತಿ ಕುರಿತು ಬಹಿರಂಗಗೊಂಡಿದೆ. ಬಳಿಕ ಪೊಲೀಸರು ತನಿಖೆ ಪೂರ್ಣಗೊಳಿಸಿದಾಗ ಇಬ್ಬರು ಬೆಂಗೂರಿನಲ್ಲಿ ಇರುವುದಾಗಿ ಮಾಹಿತಿ ಸಿಕ್ಕಿದೆ. ಇಬ್ಬರನ್ನು ಕರೆ ತಂದ ಪೋಲಿಸರು ಬುದ್ಧಿವಾದ ಹೇಳಿಮ ಮನೆಗೆ ಕಳುಹಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net