ಅಮ್ಮನ ಮೇಲೇ ಅತ್ಯಾಚಾರವೆಸಗಿದ ಪಾಪಿ ಮಗ; ಅಮ್ಮ ಸತ್ತಿದ್ದಾಳೆಂದು ಅಪ್ಪನಿಗೆ ಕರೆ ಮಾಡಿದ

rape
Published on

ಗುರುಗ್ರಾಮ: ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ಕೆಲವೊಮ್ಮೆ ಆ ತಾಯಿಯ ಮೇಲೇ ನಾವು ಅದೆಷ್ಟು ದ್ವೇಷ ಸಾಧಿಸಿಬಿಡುತ್ತೇವೆ. ಇದೇ ರೀತಿಯಲ್ಲಿ ಮಗನೊಬ್ಬ ತಾಯಿಯೊಂದಿಗೆ ಜಗಳವಾಡಿ ಆಕೆಯನ್ನೇ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

25 ವರ್ಷದ ಯುವಕನ ಅಮ್ಮನಿಗೆ ಎರಡನೇ ಮದುವೆಯಾಗಿತ್ತು. ಆಕೆ ಮೊದಲನೇ ಮದುವೆಯಾಗಿ ಮೂರು ವರ್ಷದಲ್ಲೇ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ಆತನ ತಮ್ಮನೊಂದಿಗೇ ಎರಡನೇ ಮದುವೆ ಮಾಡಿಸಲಾಗಿತ್ತು. ಎರಡನೇ ಪತಿ ನಗರದಿಂದ ಹೊರ ವಲಯದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು. ಅಲ್ಲೇ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ಆತ, ತನ್ನ ಹೆಂಡತಿ ಮತ್ತು ಅಣ್ಣನ ಮಗನಿಗಾಗಿ ಒಂದಿಷ್ಟು ಹಣವನ್ನೂ ಕಳುಹಿಸಿಕೊಡುತ್ತಿದ್ದನಂತೆ.

ಇತ್ತ ಮಗ ಆಗಾಗ ತಾಯಿಯ ಬಳಿ ಜಗಳವಾಡುತ್ತಿದ್ದ. ನನಗೆ ಹಣ ಕೊಡು ಎಂದು ಪೀಡಿಸುತ್ತಿದ್ದ. ಮಗನ ಕಾಟ ತಾಳಲಾರದೆ ಒಂದೆರೆಡು ದಿನ ಆತನನ್ನು ಮನೆಯಿಂದ ಹೊರ ಹಾಕಿದ್ದಳಂತೆ ಆ ತಾಯಿ. ಆದರೆ ಇತ್ತೀಚೆಗೆ ಸಿಟ್ಟಿಗೆದ್ದ ಮಗ ಜೀವನದಲ್ಲಿ ಕ್ಷಮಿಸಲಾಗಂದತಹ ತಪ್ಪನ್ನು ಮಾಡಿದ್ದಾನೆ.

ತನ್ನ ಹೆತ್ತ ತಾಯಿಯ ಮೇಲೇ ಅತ್ಯಾಚಾರ ಮಾಡಿದ್ದಾನೆ. ಆಕೆಯನ್ನು ಕೊಲೆ ಮಾಡಿ, ಅಪ್ಪನಿಗೆ ಕರೆ ಮಾಡಿದ್ದಾನೆ. ಅಮ್ಮ ಸತ್ತಿದ್ದಾಳೆ, ಬೇಗ ಮನೆಗೆ ಬಾ ಎಂದಿದ್ದಾನೆ. ಮನೆಗೆ ಬಂದ ತಂದೆ, ಪೊಲೀಸರಿಗೆ ವಿಚಾರ ತಿಳಿಸಿದ್ದಾನೆ. ಪೊಲೀಸ್​ ತನಿಖೆಯಲ್ಲಿ ನಿಜಾಂಶ ಹೊರಬಿದ್ದಿದೆ. ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net