ಬೈಕ್​ಗಾಗಿ ಪ್ರಾಣವನ್ನೇ ಬಿಟ್ಟ 21ರ ಯುವಕ!

suicide
Published on

ವಿಜಯನಗರ: ಬಾಳಿ ಬದುಕಬೇಕಿದ್ದ 21 ವರ್ಷದ ಯುವಕನೊಬ್ಬ ಬೈಕ್​ಗಾಗಿ ಪ್ರಾಣವನ್ನೇ ಬಿಟ್ಟಿದ್ದಾನೆ.

ಇಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪೊತಲಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ಸ್ವಾಮಿ(21) ಮೃತ ದುರ್ದೈವಿ.

ಸ್ವಾಮಿಗೆ ಬೈಕ್​ ಅಂದ್ರೆ ಪಂಚಪ್ರಾಣ. ನನಗೂ ಒಂದು ಸ್ವಂತ ಬೈಕ್ ಬೇಕು, ಕೊಡಿಸು ಎಂದು ಅಪ್ಪನ ಬಳಿ ಹಲವು ಬಾರಿ ಕೇಳಿದ್ದ. ಆದರೆ, ಸದ್ಯಕ್ಕೆ ಬೇಡ ಮಗನೆ. ಮುಂದೆ ಕೊಡಿಸುವೆ.​ ಈಗ ಹಣ ಇಲ್ಲ ಎಂದು ತಂದೆ ಎಷ್ಟೇ ಹೇಳಿದರೂ ಆತ ಮಾತ್ರ ತನ್ನ ಹಠ ಬಿಡಲೇ ಇಲ್ಲ. ಇದೇ ವಿಚಾರಕ್ಕೆ ತಂದೆ-ಮಗನ ನಡುವೆ ಸಣ್ಣ ಜಗಳವೂ ಆಗಿತ್ತಂತೆ.

ಬೈಕ್​ ಕೊಡಿಸಲಿಲ್ಲ ಎಂದು ಮನನೊಂದ ಮಗ ವಿಷ ಸೇವಿಸಿದ್ದ. ಕೂಡಲೇ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಬದುಕುಳಿಯಲಿಲ್ಲ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net