

ಲಖನೌ: ಅದೆಷ್ಟೇ ಪರಿಚಿತರಾದರೂ ಅವರು ಕರೆದೊಡನೆ ಹೋಗಿಬಿಡಬಾರದು. ಹಾಗೊಂದು ವೇಳೆ ಹೋಗುವುದಾದರೂ ತಮಗೆ ರಕ್ಷಣೆ ಇದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎನ್ನುತ್ತಾರೆ ತಿಳಿದವರು. ಆದರೆ ಇಲ್ಲೊಬ್ಬ ಬಾಲಕಿ ಪರಿಚಯಸ್ಥರು ಕರೆದರೆಂದು, ಹಿಂದೆ ಮುಂದೆ ಯೋಚಿಸದೆ ಹೋಗಿ, ಜೀವನವನ್ನೇ ಹಾಳು ಮಾಡಿಕೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:
ಉತ್ತರ ಪ್ರದೇಶದ ಕಾನ್ಪುರದ 13 ವರ್ಷದ ಬಾಲಕಿ ಈ ರೀತಿ ಮೋಸ ಹೋದ ಬಾಲಕಿ. ಇತ್ತೀಚೆಗೆ ಆಕೆಯ ಅಣ್ಣನ ಸ್ನೇಹಿತ ಸಾಹಿಲ್ ಅವಳನ್ನು ಕಾಫಿ ಕುಡಿಯಲು ಕಾಫಿ ಶಾಪ್ಗೆ ಕರೆದಿದ್ದಾನೆ. ಸಾಹಿಲ್ ಅನ್ನು ತನ್ನ ಅಣ್ಣನಂತೆಯೇ ಕಾಣುತ್ತಿದ್ದ ಬಾಲಕಿ ಬೇರೇನೂ ಯೋಚಿಸದೆ ಕಾಫಿ ಶಾಪ್ಗೆ ಹೋಗಿದ್ದಾಳೆ. ಅಲ್ಲಿಂದ ಬಾಲಕಿಯನ್ನು ಸಾಹಿಲ್ ತನ್ನ ಫ್ಲಾಟ್ಗೆ ಕರೆದುಕೊಂಡು ಹೋಗಿದ್ದಾನೆ. ಫ್ಲಾಟ್ನಲ್ಲಿ ಆಕೆಗೆ ಮದ್ಯಪಾನ ಮಾಡಿಸಿದ್ದಾನೆ. ಬಾಲಕಿ ಅಮಲಿನಿಂದಾಗಿ ಮೂರ್ಛೆ ಹೋದ ನಂತರ ಸ್ನೇಹಿತರೊಂದಿಗೆ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾನೆ. ಕಾಮದಾಸೆ ತೀರಿದ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ:
ಇತ್ತ ಮಗಳು ಕಾಣಿಸದಿದ್ದಾಗ ತಂದೆ ತಾಯಿ ಗಾಬರಿಗೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ಭಾನುವಾರ ಸಂಜೆ ವೇಳೆಗೆ ಬಾಲಕಿ ಮನೆಗೆ ವಾಪಾಸಾಗಿದ್ದಾಳೆ. ಅತ್ಯಂತ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಆಕೆ ನಡೆದ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದಾಳೆ. ಆಕೆಯ ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ದೃಢವಾದ ನಂತರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸದ್ಯ ರಾಹುಲ್ ಮತ್ತು ಮಿಥುನ್ ಹೆಸರಿನ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಹಿಲ್ ಮತ್ತು ವಿ.ಕೆ. ರಾಜಪೂತ್ ಹೆಸರಿನ ಆರೋಪಿಗಳಿಗಾಗಿ ಹುಡುಕಾಡಲಾಗುತ್ತಿದೆ. (ಏಜೆನ್ಸೀಸ್)