

ಆ.15 ಸ್ವಾತಂತ್ರೋತ್ಸವ ಹಿನ್ನೆಲೆ 100 ಮೀಟರ್ ಅಭ್ಯಾಸ ಓಟದಲ್ಲಿ ಮೂರನೇ ಸ್ಥಾನ ಪಡೆದಿದ್ದ ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಉತ್ತರಪ್ರದೇಶದ ನಾರ್ಪಾರ್ದಲ್ಲಿ ಬುಧವಾರ ನಡೆದಿದೆ.
ಇಲ್ಲಿನ ಭಗ್ಗಾಪೂರ್ವ ಗ್ರಾಮದ ನಿವಾಸಿ ಹಿಮಾಂಶು(14) ಮೃತ ಬಾಲಕಿ ಎಂದು ಗುರುತಿಸಲಾಗಿದೆ. 15ಕ್ಕೂಅಧಿಕ ಸಹಾಪಾಠಿಗಳೊಂದಿಗೆ 100 ಮೀ. ಓಟದ ಪಂದ್ಯದಲ್ಲಿ ಭಾಗವಹಿಸಿದ್ದರು. ಹಿಮಾಂಶು ಅಂತಿಮ ಗೆರೆ ದಾಟಿದ ಬಳಿಕ ನೆಲಕ್ಕೆ ಬಿದ್ದರು. ಅಲ್ಲಿಂದ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಸಮೀಪದ ಆರೋಗ್ಯ ಕೇಂದ್ರಕ್ಕೆದಾಖಲಿಸಿದರು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ವೈದ್ಯರು ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಆಸ್ಪತ್ರೆಗೆ ಬರುವ ಮುನ್ನವೇ ಬಾಲಕಿ ಮೃತಪಟ್ಟಿದ್ದಳು. ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿಗೆ ಕಾರಣ ತಿಳಿಯಬಹುದು ಎಂದು ಆರೋಗ್ಯ ಕೇಂದ್ರದ ವೈದ್ಯ ಡಾ.ಸುರೇಶ್ ವರ್ಮಾ ತಿಳಿಸಿದ್ದಾರೆ.(ಏಜೆನ್ಸೀಸ್)