

ಮುಂಬೈ: ರಾಷ್ಟ್ರದ ವಾಣಿಜ್ಯ ನಗರ ಮುಂಬೈನಲ್ಲಿ 99 ವರ್ಷದ ವೃದ್ಧೆ ವಲಸೆ ಕಾರ್ಮಿಕರಿಗೆ ರೊಟ್ಟಿ ತಯಾರಿಸಿ ಪ್ಯಾಕ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಕರಾಚಿ ಮೂಲದ ವಕೀಲ ಜಾಹೀದ್ ಎಫ್ ಇಬ್ರಾಹಿಂ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಮುಂಬೈನಲ್ಲಿ 99 ವರ್ಷದ ವೃದ್ಧೆ ವಲಸೆ ಕಾರ್ಮಿಕರಿಗೆ ಆಹಾರ ತಯಾರಿಸಿ ಅದನ್ನು ಪ್ಯಾಕ್ ಮಾಡುತ್ತಿದ್ದಾರೆ ಎಂದು ವಿಡಿಯೋಗೆ ಶಿರ್ಷಿಕೆ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ.
ವೀಕ್ಷಣೆ ಮಾಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ವೃದ್ಧೆಯ ಆರೋಗ್ಯ ಚೆನ್ನಾಗಿರಲಿ, ಇವರ ಕೆಲಸ ಶ್ಲಾಘನೀಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಓರ್ವ ನೆಟ್ಟಿಗ ಈ ವಿಡಿಯೋ ನನ್ನಲ್ಲಿದ್ದ ಕೆಟ್ಟ ಚಿಂತನೆಯನ್ನು ನಾಶ ಮಾಡಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್)