ರೂ.2000 ನೋಟುಗಳು ಶೇ.98.24ರಷ್ಟು ವಾಪಸ್

2000 rupee
Published on

ಮುಂಬೈ: ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದು ಎರಡು ವರ್ಷಗಳಾಗುತ್ತ ಬಂದಿದ್ದು, ಈವರೆಗೆ 98.24ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಶುಕ್ರವಾರ ಹೇಳಿದೆ. 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಆರ್​ಬಿಐ 2023ರ ಮೇ 19ರಂದು ಪ್ರಕಟಿಸಿತ್ತು. ಆದಾಗ್ಯೂ, ಇನ್ನೂ ಕೆಲ ನೋಟುಗಳು ಚಲಾವಣೆಯಲ್ಲಿವೆ. 2023ರ ಮೇ 19ರಂದು ಚಲಾವಣೆ ರದ್ದುಪಡಿಸಿದಾಗ ಚಾಲ್ತಿಯಲ್ಲಿದ್ದ 2 ಸಾವಿರ ಮುಖಬೆಲೆಯ ನೋಟುಗಳ ಮೊತ್ತ 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. 2025ರ ಏಪ್ರಿಲ್ 30ರ ವೇಳೆಗೆ 6,266 ಕೋಟಿ ರೂ. ಗೆ ಇಳಿದಿದೆ. 2 ಸಾವಿರ ಮುಖಬೆಲೆಯ ನೋಟುಗಳ ಪೈಕಿ ಈವರೆಗೆ ಶೇಕಡ 98.24ರಷ್ಟು ನೋಟುಗಳು ವಾಪಸ್ ಬಂದಿವೆ ಎಂದೂ ಆರ್​ಬಿಐ ಹೇಳಿದೆ.

ಗ್ರಾಹಕರು ತಮ್ಮ ಬಳಿ ಇರುವ 2000 ರೂ. ಮುಖಬೆಲೆಯ ನೋಟುಗಳನ್ನು ಎಲ್ಲ ಬ್ಯಾಂಕ್​ಗಳಲ್ಲಿ ಬದಲಿಸಿಕೊಳ್ಳಲು ಅಥವಾ ಖಾತೆಗೆ ಜಮಾ ಮಾಡಿಕೊಳ್ಳಲು 2023ರ ಅಕ್ಟೋಬರ್ 7ರವರೆಗೆ ಅವಕಾಶವಿತ್ತು. ಪ್ರಸ್ತುತ ದೇಶದ 19 ಸ್ಥಳಗಳಲ್ಲಿರುವ ಆರ್​ಬಿಐ ಕಚೇರಿಗಳಲ್ಲಿ ಮಾತ್ರ ಈ ಸೌಲಭ್ಯ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net