96 ಸೀಕ್ವೆಲ್ ತೆರೆಗೆ ಬರುವುದು ಖಚಿತ! ರಾಮ್, ಜಾನು ಪಾತ್ರದಲ್ಲಿ ಯಾರು? ಹೊಸ ಅಪ್ಟೇಟ್​ ಕೊಟ್ಟ ನಿರ್ದೇಶಕರು

ವಿಜಯವಾಣಿ (37)
Published on

96 Sequel: ತಮಿಳಿನಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಚಿತ್ರಗಳನ್ನೇ ನೀಡುತ್ತ ಬಂದಿರುವ ನಿರ್ದೇಶಕ ಸಿ. ಪ್ರೇಮ್​ ಕುಮಾರ್​, ಇತ್ತೀಚೆಗೆ ತೆರೆಕಂಡ ‘ಮಿಯ್ಯಾಳಗನ್’ ಚಿತ್ರದಲ್ಲಿಯೂ ಅದ್ಭುತ ಯಶಸ್ಸನ್ನು​ ಕಂಡರು. ಸಿನಿಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದ ಬೆನ್ನಲ್ಲೇ 2018ರಲ್ಲಿ ಸೂಪರ್ ಹಿಟ್ ಚಿತ್ರಗಳ​ ಸಾಲಿಗೆ ಸೇರಿದ ತಮ್ಮ ಕಲ್ಟ್ ’96’ ಸಿನಿಮಾದ ಸೀಕ್ವೆಲ್​ ತೆರೆಗೆ ತರಲು ನಿರ್ದೇಶಕರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಕುರಿತು ಇತ್ತೀಚೆಗಷ್ಟೇ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬ್ಲಾಕ್​ಬಸ್ಟರ್​ ರೊಮ್ಯಾಂಟಿಕ್​ ತಮಿಳಿನ ’96’ ಚಿತ್ರಕ್ಕೆ ಕೇವಲ ತಮಿಳು ಚಿತ್ರಪ್ರೇಮಿಗಳು ಮಾತ್ರವಲ್ಲದೇ ಇತರೆ ಭಾಷೆಯ ಅಭಿಮಾನಿಗಳು ಸಹ ನಿರ್ದೇಶಕರ ಕಥೆಗೆ ಮನಸೋತಿದ್ದಾರೆ. ಈಗ ಇದರ ಸೀಕ್ವೆಲ್​ ಬರುತ್ತಿದೆ ಎಂಬ ಸುದ್ದಿ ತಿಳಿಯುತ್ತಿದಂತೆ ಒಂದಷ್ಟು ಮಂದಿ ಸಂತಸ, ಕುತೂಹಲ ವ್ಯಕ್ತಪಡಿಸಿದರೆ, ಹಲವರು ಸೀಕ್ವೆಲ್​ ಎಲ್ಲ ಬೇಕಿಲ್ಲ.ಮೊದಲ ಭಾಗ ಏನಿತ್ತೋ ಅದೇ ಸಾಕು. ಇದರ ಮುಂದುವರಿದ ಭಾಗ ನಿಜಕ್ಕೂ ಮನಸ್ಸಿಗೆ ಮುದ ನೀಡುವುದಿಲ್ಲ. ರಾಮ್ ಮತ್ತು ಜಾನು ಪಾತ್ರಗಳು ಹಾಗೆಯೇ ಇರಲಿ. ತ್ರಿಶಾ ಮತ್ತು ವಿಜಯ್ ಸೇತುಪತಿ ಪಾತ್ರಗಳು ಇಂದಿಗೂ ನಮ್ಮ ಕಣ್ಣಿನಲ್ಲಿ ಕಟ್ಟಿದಂತಿದೆ. ಹೀಗಾಗಿ ಚಿತ್ರದ ಎರಡನೇ ಭಾಗ ಬೇಡ ಎಂಬ ಮಾತುಗಳನ್ನು ಜಾಲತಾಣಗಳ ಮುಖೇನ ವ್ಯಕ್ತಪಡಿಸಿದ್ದಾರೆ.

ಮಿಶ್ರ ಅನಿಸಿಕೆಗಳ ನಡುವೆಯೂ ಸೀಕ್ವೆಲ್​ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ನಿರ್ದೇಶಕರು, 96 ಭಾಗ 2ರ ಸ್ಕ್ರಿಪ್ಟ್​ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಈ ಕುರಿತು ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿರುವ ಅವರು, ಚಿತ್ರದ ಸ್ಕ್ರಿಪ್ಟ್​ ಕೆಲಸಗಳು ಪೂರ್ಣವಾಗಿದೆ. ಶೀಘ್ರವೇ ಚಿತ್ರೀಕರಣವನ್ನು ಶುರು ಮಾಡುತ್ತೇನೆ ಎಂದು ಹೇಳಿದ್ದಾರೆ. ಆದ್ರೆ, ರಾಮ್ ಮತ್ತು ಜಾನು ಪಾತ್ರಗಳಲ್ಲಿ ನಟಿ ತ್ರಿಷಾ ಮತ್ತು ವಿಜಯ್ ಸೇತುಪತಿ ಅವರೇ ಅಭಿನಯಿಸಲಿದ್ದಾರೆಯೇ? ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಇದು ಚಿತ್ರದ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net