ಭೀಕರ ಅಪಘಾತ: ಮೂರು ಕುಟುಂಬದ 9 ಮಂದಿ ಸಾವು, ಮೂವರ ಪರಿಸ್ಥಿತಿ ಗಂಭೀರ

msy accident
ಅಪಘಾತಕ್ಕಿಡಾದ ವಾಹನದಲ್ಲಿ ಇದ್ದ ಕುಟುಂಬಸ್ಥರು
Published on

ಮೈಸೂರು: ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂರು ಕುಟುಂಬದ ಒಂಬತ್ತು ಜನ ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲದ ಟಿ.ನರಸೀಪುರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.

ಬಿಳ್ಯಾಳ ಮಂಜುನಾಥ್(35) ಪತ್ನಿ ಪೂರ್ಣಿಮಾ(30) ಮಗ ಪವನ(10), ಕಾರ್ತಿಕ(08) ಮೃತರು ಒಂದು ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸಂದೀಪ( 24), ತಾಯಿ ಸುಜಾತ( 40), ತಂದೆ ಕೊಟ್ರೇಶ್( 45) ಮೃತರು ಇನ್ನೊಂದು ಕುಟುಂಬಕ್ಕೆ ಸೇರಿದವರು. ಗಾಯತ್ರಿ(35), ಮಗ ಮಗಳು ಸ್ಯ್ರಾವ್ಯ( 03) ಮತ್ತೊಂದು ಕುಟುಂಬದವರಾಗಿದ್ದಾರೆ. ಶಶಿಕುಮಾರ್(24 ) , ಜನಾರ್ದನ (40), ಪುನೀತ್(04) ಚಿಂತಾಜನಕ ಮೂರು ಜನರ ಸ್ಥಿತಿ ಚಿಂತಾಜನಕವಾಗಿದೆ.

ಮೈಸೂರಿನ ಕೊಳ್ಳೆಗಾಲದ ಬಳಿ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ಬಳ್ಳಾರಿ ತಾಲೂಕಿನ ಸಂಗನಕಲ್ಲ ಗ್ರಾಮಸ್ಥರು. ಮೃತರು ಮೂರು ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೂರು ಕುಟುಂಬದ 12 ಜನ ಸೇರಿ ಮೈಸೂರಿನಿಂದ ಬಾಡಿಗೆ ಕಾರು ಮಾಡಿಕೊಂಡು ಚಾಮುಂಡೇಶ್ವರಿ ದೇವಾಲಯ, KRS ಡ್ಯಾಂಗೆ ತೆರಳಿದ್ದರು. ವಾಪಸ್ ಆಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ. ಮೃತ ಕುಟುಂಬಕ್ಕೆ ತಲಾ 2ಲಕ್ಷ ಪರಿಹಾರ ಘೋಷಣೆ ಮಾಡಿ ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net