

Maoists : ಛತ್ತಿಸ್ಘಡ ರಾಜ್ಯದ ನಿಷೇಧಿತ ಸಿಪಿಐ ಸಂಘಟನೆಯ 86 ಮಾವೋವಾದಿಗಳು ತೆಲಂಗಾಣ ಭದ್ರಾದ್ರಿಯ ಕೊತ್ತಗೂಡಂ ಜಿಲ್ಲೆಯಲ್ಲಿ ಪೊಲೀಸರ ಎದುರು ಶನಿವಾರ(ಏ.05) ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕೊಂಡೇನಾಳು ಪಿಎಸಿಸಿ ಬ್ಯಾಂಕ್ಗೆ ಮೋಹನ್ ಅಧ್ಯಕ್ಷ
ನಾಲ್ವರು ಸಮಿತಿ ಸದಸ್ಯರು ಸೇರಿದಂತೆ(AMC) ಮಾವೋವಾದಿಗಳು ನಕ್ಸಲಿಸಂನ ಹಿಂಸಾತ್ಮಕ ಮಾರ್ಗವನ್ನು ತ್ಯಜಿಸಿ ತಮ್ಮ ಕುಟುಂಬದೊಂದಿಗೆ ಶಾಂತಿಯುತ ಜೀವನವನ್ನು ಕಳೆಯಲು ನಿರ್ಧಾರಿಸಿದ್ದು, ತೆಲಂಗಾಣ ಪೊಲೀಸ್ ಮಹಾನಿರ್ದೇಶಕ(IGP) ಎಸ್.ಚಂದ್ರಶೇಖರ್ರೆಡ್ಡಿ ಎದುರು ಶರಣಾದರು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ನಾಲ್ವರು ಸಮಿತಿ ಸದಸ್ಯರ ತಲೆಗೆ ನಾಲ್ಕು ಲಕ್ಷ ರೂ. ಘೋಷಿಸಲಾಗಿತ್ತು ಎಂದು ಭದ್ರಾದ್ರಿಯ ಕೊತ್ತಗೂಡಂ ಜಿಲ್ಲೆ ಎಸ್ಪಿ ಬಿ.ರೋಹಿತ್ ರಾಜ್ ತಿಳಿಸಿದ್ದಾರೆ.
ಪೊಲೀಸರ 'ಆಪರೇಷನ್ ಚೆಯುತ' ಕಾರ್ಯಕ್ರಮದಡಿಯಲ್ಲಿ ಬುಡಕಟ್ಟು (ಆದಿವಾಸಿ) ಸಮುದಾಯಗಳಿಗೆ ಅಭಿವೃದ್ಧಿ ಮತ್ತು ಕಲ್ಯಾಣ ಉಪಕ್ರಮಗಳ ಜತೆಗೆ ಮಾಜಿ ಬಂಡುಕೋರರಿಗೆ ನೀಡಲಾಗುತ್ತಿರುವ ಕಲ್ಯಾಣ ಕ್ರಮಗಳ ಬಗ್ಗೆ ತಿಳಿದ ನಂತರ ಮಾವೋವಾದಿಗಳು ಶರಣಾಗುತ್ತಿದ್ದಾರೆ. ಈ ವರ್ಷ ಇಲ್ಲಿಯವರೆಗೆ ವಿವಿಧ ಕೇಡರ್‌ಗಳ 224 ಮಾವೋವಾದಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ(ಏಜೆನ್ಸೀಸ್).