ಟೆಕ್ಸಾಸ್​​ನಲ್ಲಿ ಭಾರೀ​ ಪ್ರವಾಹ; 81 ಜನರು ಬಲಿ: 41 ಮಂದಿ ಕಾಣೆ! | Texas

dk - 2025-07-07T182943.449
Published on

ಅಮೆರಿಕಾ: ಮಧ್ಯ ಟೆಕ್ಸಾಸ್​ನಲ್ಲಿ(Texas) ಶುಕ್ರವಾರ ಹಠಾತ್​​ ಸಂಭಂವಿಸಿದ ಭಾರೀ ಪ್ರವಾಹದಲ್ಲಿ 81 ಜನರು ಮೃತಪಟ್ಟಿದ್ದು, 41 ಮಂದಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ಸೋವಾರ ಧೃಢಪಡಿಸಿದೆ.

ಹೆಚ್ಚಿನ ಸಾವು-ನೋವುಗಳು ಕೆರ್​ ಕೌಂಟಿಯಲ್ಲಿ ಸಂಭವಿಸಿದೆ. ಅಲ್ಲಿ ನದಿ ತೀರದ ಕ್ರಿಶ್ಚಿಯನ್​​ ಹುಡುಗಿಯರ ಶಿಬಿರ ಪ್ರವಾಹಕ್ಕೆ ಸಿಲುಕಿದೆ. ಈ ಹಿನ್ನೆಲೆ ಅಲ್ಲಿ ಹಲವಾರು ಮಹಿಳೆ- ಮಕ್ಕಳು ಮೃತಪಟ್ಟಿದ್ದು, ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಟ್ರಾವಿಸ್ ಕೌಂಟಿ, ಬರ್ನೆಟ್ ಕೌಂಟಿ, ವಿಲಿಯಮ್ಸನ್ ಕೌಂಟಿ, ಕೆಂಡಾಲ್ ಕೌಂಟಿ ಮತ್ತು ಟಾಮ್ ಗ್ರೀನ್ ಕೌಂಟಿ ಪ್ರದೇಶಗಳಲ್ಲಿ ಅಧಿಕ ಸಾವು-ನೋವುಗಳಾಗಿವೆ ಎಂದು ವರದಿ ಉಲ್ಲೇಖಿಸಿದೆ.

ಕಾಣೆಯಾದವರನ್ನು ಪತ್ತೆ ಮಾಡುವ ಕಾರ್ಯ ರಕ್ಷಣಾ ತಂಡದಿಂದ ವೇಗವಾಗಿ ನಡೆಯುತ್ತಿದೆ. ಅಲ್ಲದೆ, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಇನ್ನು ಹಲವು ಶವಗಳನ್ನು ಗುರುತಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಂತ ಭೀಕರ ಪ್ರವಾಹಕ್ಕೆ ಒಳಗಾದ ಕೆರ್ ಕೌಂಟಿಯಾದ್ಯಂತ ಮೊದಲ 36 ಗಂಟೆಗಳಲ್ಲಿ 850 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net