18 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿದ ಮಹಿಳಾ ಅರಣ್ಯಾಧಿಕಾರಿ! ವಿಡಿಯೋ ವೈರಲ್​​ | Black Cobra

dk - 2025-07-07T173713.357
Published on

Black Cobra: ಯಾವುದೇ ಸಾಧನಗಳಿಲ್ಲದೆ ಬರೊಬ್ಬರಿ 18 ಅಡಿ ಉದ್ದದ ಬೃಹತ್​ ಕಾಳಿಂಗ ಸರ್ಪವನ್ನು ಮಹಿಳಾ ಅರಣ್ಯಾಧಿಕಾರಿ ಸೆರೆ ಹಿಡಿದ ಘಟನೆ ಕೇರಳದಲ್ಲಿ ನಡೆದಿದೆ. ಅಲ್ಲದೆ, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಕೇರಳದ ಪರುಪತಿಪಲ್ಲಿ ವಲಯದ ಅರಣ್ಯಾಧಿಕಾರಿ ಆಗಿರುವ ಜಿ.ಎಸ್​.ರೋಶ್ನಿ ಅವರು ಕೇರಳ ವಸತಿ ಪ್ರದೇಶದಿಂದ 18 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ರಕ್ಷಿಸಿದ್ದಾರೆ. ಇದೀಗ ಈ ವಿಡಿಯೋ ಕ್ಲಿಪ್​ಗಳಿಗೆ ಇಂಟರ್ನೆಟ್​ನಲ್ಲಿ ಹರಿದಾಡುತ್ತಿದ್ದು, ಅಧಿಕಾರಿ ಬಗ್ಗೆ ಭಾರೀ ಪ್ರಂಶಂಸೆ ವ್ಯಕ್ತವಾಗುತ್ತಿದೆ.

ತಿರುವನಂತಪುರದ ಪೆಪ್ಪರ ಪ್ರದೇಶದ ಅಂಚುಮರುತುಮೂಟ್​ ಬಳಿಕ ನೀರಿನ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಸ್ಥಳಿಯರು ಕಿಂಗ್​ ಕೋಬ್ರಾವನ್ನು ನೋಡಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಳಿಂಗ ಸರ್ಪವನ್ನು ಸೆರೆ ಹಿಡಿಯುತ್ತಿರುವುದು ವಿಡಿಯೋದಲ್ಲಿ ನೋಡಬಹುದು.

ವಿಡಿಯೋದಲ್ಲೇನಿದೆ? ಈ ವಿಡಿಯೋವನ್ನು ಎಕ್ಸ್​​ ಬಳಕೆದಾರ @Rajana-Medhekar ಎಂಬುವವರು ಹಂಚಿಕೊಂಡಿದ್ದು, 18 ಅಡಿ ಉದ್ದ ಕಾಳಿಂಗ ಸರ್ಪವನ್ನು ಹಿಡಿಯುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ''ವಿಡಿಯೋದಲ್ಲಿ ಅರಣ್ಯಾಧಿಕಾರಿ ಜಿ.ಎಸ್​.ರೋಶ್ನಿ ತನ್ನ ಕೈಯಲ್ಲಿ ಉದ್ದವಾದ ಕೋಲು ಮತ್ತು ಸರಿಸೃಪ ಹಿಡಿಯುವ ಚೀಲವನ್ನು ಹಿಡಿದುಕೊಂಡ ಧೈರ್ಯದಿಂದ ಶಾಂತವಾಗಿ ಸರ್ಪವನ್ನು ಹಿಡಿಯುತ್ತಿದ್ದಾರೆ''.

ಜಿ.ಎಸ್. ರೋಶ್ನಿ ಯಾರು? ಜಿ.ಎಸ್. ರೋಶ್ನಿ ಅರಣ್ಯ ಬೀಟ್ ಅಧಿಕಾರಿಯಾಗಿದ್ದು, ತಮ್ಮ ಎಂಟು ವರ್ಷಗಳ ವೃತ್ತಿಜೀವನದಲ್ಲಿ 800 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ವಿಷಕಾರಿ ಮತ್ತು ವಿಷಕಾರಿಯಲ್ಲದ ಹಾವುಗಳನ್ನು ಹಿಡಿದಿದ್ದಾರೆ. ಈ ದೈತ್ಯ ಕಿಂಗ್ ಕೋಬ್ರಾವನ್ನು ಹಿಡಿದ ನಂತರ, ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಇದು ಬಹಳ ಅಪರೂಪ ಎಂದು ಅವರು ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net