80 ಸೆಕೆಂಡುಗಳಲ್ಲಿ 20ಕ್ಕೂ ಹೆಚ್ಚು ಕಳ್ಳರು 9 ಕೋಟಿ ರೂ. ಮೌಲ್ಯದ ಆಭರಣ ದೋಚಿದ್ರು! Jewellery Store

us thief
Published on

Jewellery Store: ಕಳ್ಳರು ರಾತ್ರಿ ವೇಳೆ ಮನೆ, ಅಂಗಡಿ, ದೇವಸ್ಥಾನಗಳಿಗೆ ನುಗ್ಗಿ ಹಣ, ಬಂಗಾರದಂತಹ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ಆದರೆ ಈಗ ಹಾಡಹಗಲೇ ದರೋಡೆ ಮಾಡುತ್ತಿದ್ದಾರೆ ಎನ್ನುವುದು ತಿಳಿದಿರುವ ಸಂಗತಿ. ಆದರೆ ಇಂದು ನಾವು ನಿಮಗೆ ತೋರಿಸುತ್ತಿರುವ ವಿಡಿಯೋ ಕೊಂಚ ವಿಭಿನ್ನವಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹಗಲು ಹೊತ್ತಿನಲ್ಲಿ, 20 ಕ್ಕೂ ಹೆಚ್ಚು ಜನರ ಗುಂಪು ಆಭರಣ ಅಂಗಡಿಯನ್ನು ಧ್ವಂಸ ಮಾಡಿ ಪರಾರಿಯಾಗಿ, ಕೇವಲ 80 ಸೆಕೆಂಡುಗಳಲ್ಲಿ 1 ಮಿಲಿಯನ್ ಡಾಲರ್ ಅಥವಾ ಸುಮಾರು 9 ಕೋಟಿ ರೂ. ಮೌಲ್ಯದ ವಸ್ತುಗಳನ್ನು ದೋಚಿದೆ. ಈ ವಿಚಿತ್ರ ಕಳ್ಳತನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗುತ್ತಿದೆ.

ಕಳೆದ ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋದಿಂದ ಸುಮಾರು 34 ಮೈಲುಗಳಷ್ಟು ಪೂರ್ವಕ್ಕೆ ಸ್ಯಾನ್ ರಾಮನ್‌ನಲ್ಲಿರುವ ಹೆಲ್ಲರ್ ಜ್ಯುವೆಲ್ಲರ್ಸ್‌ನಲ್ಲಿ ದರೋಡೆ ನಡೆದಿದೆ. ಕಪ್ಪು ಬಟ್ಟೆ ಮತ್ತು ಮುಖವಾಡಗಳನ್ನು ಧರಿಸಿದ ಕಳ್ಳರು ಅಂಗಡಿಯೊಳಗೆ ಪ್ರವೇಶಿಸಿ, ಲೋಹದ ರಾಡ್‌ಗಳು ಮತ್ತು ಪಿಕಾಕ್ಸ್‌ಗಳಿಂದ ಒಡೆದು ಆಭರಣಗಳನ್ನು ಕದಿಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಕಳ್ಳರ ವಾಹನಗಳಲ್ಲಿ ಒಂದನ್ನು ಸಹ ಬೆನ್ನಟ್ಟಲಾಯಿತು, ಆದರೆ ಅವರು ತಮ್ಮ ವೇಗವನ್ನು ಹೆಚ್ಚಿಸಿದರು ಮತ್ತು ಭಾರೀ ದಟ್ಟಣೆಯಿಂದಾಗಿ, ಇತರರಿಗೆ ಯಾವುದೇ ಅಪಾಯವಾಗದಂತೆ ಪೊಲೀಸರು ತಮ್ಮ ವಾಹನವನ್ನು ನಿಲ್ಲಿಸಿದರು. ಹೀಗಾಗಿ ಖದೀಮರು ಎಸ್ಕೇಪ್​ ಆಗಿದ್ದಾರೆ. ಈ ದರೋಡೆ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಆಭರಣ ಅಂಗಡಿಯು 2023 ರಲ್ಲಿ ಇದೇ ರೀತಿಯ ದರೋಡೆಗೆ ಒಳಗಾಯಿತು, ನಂತರ ಅಂಗಡಿಯ ಭದ್ರತಾ ದ್ವಾರಗಳನ್ನು ನವೀಕರಿಸಲಾಯಿತು. ಆದಾಗ್ಯೂ, ಅದು ಯಾವುದೇ ಪ್ರಯೋಜನವಾಗಲಿಲ್ಲ. ಕಳ್ಳರು ತಪ್ಪಿಸಿಕೊಳ್ಳಲು ಗುಂಡುಗಳ ಸುರಿಮಳೆಗೈದು ಗೇಟ್ ಅನ್ನು ಭೇದಿಸಿ ಒಳಗೆ ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net