

South Films: ಜೂನ್ನಿಂದ ಜುಲೈಗೆ ಸಮೀಪಿಸುತ್ತಿರುವ ಹೊತ್ತಲೇ ಒಂದು ಬಾರಿ ಹಿಂತಿರುಗಿ ನೋಡಿದಾಗ 2025ರ ಮೊದಲಾರ್ಧ ಈಗಾಗಲೇ ಮುಗಿದುಹೋಗಿದೆ. ಇನ್ನು ಉಳಿದಿರುವುದು ದ್ವಿತೀಯಾರ್ಧ ಮಾತ್ರ. ಹೀಗಿರುವಾಗ ವರ್ಷದ ಮೊದಲಾರ್ಧದಲ್ಲಿ ತೆರೆಕಂಡ ಬಹುತೇಕ ಸೌತ್ ಸಿನಿಮಾಗಳ ಪೈಕಿ ಸಿನಿರಸಿಕರಿಂದ ಅಪಾರ ಮೆಚ್ಚುಗೆ, ಪ್ರಶಂಸೆ ಪಡೆದ ಚಿತ್ರಗಳು ಕೆಲವೇ ಕೆಲವು ಮಾತ್ರ.
ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಗುವುದು ಮಾತ್ರವಲ್ಲದೇ ಒಟಿಟಿಯಲ್ಲಿಯೂ ಪ್ರೇಕ್ಷಕರ ಮನಸೂರೆಗೊಳಿಸುತ್ತಿರುವ ಚಿತ್ರಗಳು ಹಲವಾರು. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಾಣುವುದರ ಜೊತೆ ಜೊತೆಯಲ್ಲೇ ಉತ್ತಮ ವಿಮರ್ಶೆ ಪಡೆದ ಚಿತ್ರಗಳು ಒಂದೆಡೆಯಾದರೆ, ಕೇವಲ ಒಟಿಟಿಯಲ್ಲೇ ರಿಲೀಸ್ ಪಡೆದು, ನಿರೀಕ್ಷೆಗೂ ಮೀರಿದ ಮೆಚ್ಚುಗೆಗಳು ಪಡೆಯುತ್ತಿರುವ ಚಿತ್ರಗಳು ಮತ್ತೊಂದೆಡೆ. ಪ್ರಸ್ತುತ ಈ ಸಾಲಿನಲ್ಲಿ ಮಲಯಾಳಂ, ತಮಿಳು, ತೆಲುಗು ಚಿತ್ರಗಳು ಮುಂಚೂಣಿಯಲ್ಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾಗಳು ಈ ಪಟ್ಟಿಯಲ್ಲಿವೆ? ಚಿತ್ರಪ್ರೇಮಿಗಳ ಗಮನ ಸೆಳೆದಿವೆ? ಎಂಬುದರ ವಿವರ ಹೀಗಿದೆ ಗಮನಿಸಿ.
ತಾರಾಗಣ: ಮಣಿಕಂದನ್, ಸಾನ್ವೆ ಮೇಘನಾ, ಆರ್. ಸುಂದರರಾಜನ್, ಗುರು ಸೋಮಸುಂದರಂ, ಕುಡಸ್ಸನಾದ್ ಕನಕಂ
ನಿರ್ದೇಶಕರು: ರಾಜೇಶ್ವರ ಕಾಳಿಸಾಮಿ
ಜಾನರ್: ಕಾಮಿಡಿ, ಡ್ರಾಮಾ
ಒಟಿಟಿ: ಜೀ5
ತಾರಾಗಣ: ಆಸಿಫ್ ಅಲಿ, ಅನಸ್ವರ ರಾಜನ್, ಮನೋಜ್ ಕೆ ಜಯನ್, ಸಿದ್ದಿಕ್, ಜಗದೀಶ್, ಸಾಯಿಕುಮಾರ್, ಹರಿಶ್ರೀ ಅಶೋಕನ್, ಮಮ್ಮುಟ್ಟಿ (ಎಐ-ವಿಶೇಷತೆ)
ನಿರ್ದೇಶಕರು: ಜೋಫಿನ್ ಟಿ. ಚಾಕೊ
ಜಾನರ್: ಕ್ರೈಮ್, ಸಸ್ಪೆನ್ಸ್
ಒಟಿಟಿ: ಸೋನಿ ಲೈವ್
ತಾರಾಗಣ: ಪ್ರಿಯದರ್ಶಿ ಪುಲಿಕೊಂಡ, ಪಿ. ಸಾಯಿ ಕುಮಾರ್, ಶಿವಾಜಿ, ರೋಹಿಣಿ, ಹರ್ಷವರ್ಧನ್
ನಿರ್ದೇಶಕರು: ರಾಮ್ ಜಗದೀಶ್
ಜಾನರ್: ಕಾನೂನು ಆಧರಿತ, ಡ್ರಾಮಾ
ಒಟಿಟಿ: ನೆಟ್‌ಫ್ಲಿಕ್ಸ್
ತಾರಾಗಣ: ನಟ ಮೋಹನ್ ಲಾಲ್, ಶೋಬನಾ, ಪ್ರಕಾಶ್ ವರ್ಮಾ, ಫರ್ಹಾನ್ ಫಾಸಿಲ್, ಮಣಿಯನ್ಪಿಳ್ಳ ರಾಜು, ಬಿನು ಪಪ್ಪು, ಇರ್ಷಾದ್ ಅಲಿ, ಆರ್ಷಾ ಚಾಂದಿನಿ ಬೈಜು
ನಿರ್ದೇಶಕರು: ತರುಣ್ ಮೂರ್ತಿ
ಜಾನರ್: ಕ್ರೈಂ, ಥ್ರಿಲ್ಲರ್
ಒಟಿಟಿ: ಜಿಯೋ ಹಾಟ್ಸ್ಟಾರ್
ತಾರಾಗಣ: ಶಶಿಕುಮಾರ್, ಮಿಥುನ್ ಜೈ ಶಂಕರ್, ಕಮಲೇಶ್ ಜಗನ್, ಯೋಗಿ ಬಾಬು, ರಮೇಶ್ ತಿಲಕ್, ಎಂಎಸ್ ಭಾಸ್ಕರ್, ಇಲಂಗೋ ಕುಮಾರವೇಲ್
ನಿರ್ದೇಶಕರು: ಅಭಿಶನ್ ಜೀವಿಂತ್
ಜಾನರ್: ಕಾಮಿಡಿ, ಡ್ರಾಮಾ
ಒಟಿಟಿ: ಜಿಯೋ ಹಾಟ್ಸ್ಟಾರ್
ತಾರಾಗಣ: ನಟ ಚಿಯಾನ್ ವಿಕ್ರಮ್, ಎಸ್.ಜೆ. ಸೂರ್ಯ, ಸೂರಜ್ ವೆಂಜರಮೂಡು, ದುಶಾರ ವಿಜಯನ್, ಪೃಧ್ವಿ ರಾಜ್, ಬಾಲಾಜಿ ಎಸ್.ಯು, ರಮೇಶ್ ಇಂದಿರಾ, ಮಾಲಾ ಪಾರ್ವತಿ
ನಿರ್ದೇಶಕರು: ಎಸ್.ಯು. ಅರುಣ್ ಕುಮಾರ್
ಜಾನರ್: ಆ್ಯಕ್ಷನ್, ಥ್ರಿಲ್ಲರ್
ಒಟಿಟಿ: ಪ್ರೈಮ್ ವಿಡಿಯೋ
ತಾರಾಗಣ: ಸೂರಜ್ ವೆಂಜರಮೂಡು, ಶರಫ್ ಯು ಧೀನ್, ಸಂದೀಪ್ ಪ್ರದೀಪ್, ಸಾಫ್, ಅರು ಅಜಿಕುಮಾರ್, ಅರುಣ್ ಪ್ರದೀಪ್, ನಿರಂಜನ ಅನೂಪ್, ಪೂಜಾ ಮೋಹನರಾಜ್
ನಿರ್ದೇಶಕರು: ಮನು ಸ್ವರಾಜ್
ಜಾನರ್: ಫ್ಯಾಂಟಸಿ, ಕಾಮಿಡಿ
ಒಟಿಟಿ: ಜಿಯೋ ಹಾಟ್ಸ್ಟಾರ್
ತಾರಾಗಣ: ನಟ ನಾನಿ, ಶ್ರೀನಿಧಿ ಶೆಟ್ಟಿ, ರಾವ್ ರಮೇಶ್, ಸಮುದ್ರಕನಿ, ಟಿಸ್ಕಾ ಚೋಪ್ರಾ, ಅಡಿವಿ ಶೇಷ್, ಕಾರ್ತಿ
ನಿರ್ದೇಶಕರು: ಸೈಲೇಶ್ ಕೊಳನು
ಜಾನರ್: ಆ್ಯಕ್ಷನ್, ಥ್ರಿಲ್ಲರ್
ಒಟಿಟಿ: ನೆಟ್‌ಫ್ಲಿಕ್ಸ್