ದಕ್ಷಿಣ ಭಾರತದ 9 ಸಿನಿಮಾಗಳು ಒಟಿಟಿಗೆ ಲಗ್ಗೆ; ಯಾವ ನಟರ ಚಿತ್ರಗಳು ರಿಲೀಸ್​? ಇಲ್ಲಿದೆ ಪಟ್ಟಿ | South Films

ವಿಜಯವಾಣಿ - 2025-08-21T185040.280
Published on

South Films: ವರ್ಷದ ದ್ವಿತೀಯಾರ್ಧದಲ್ಲಿ ಭಾರತೀಯ ಚಲನಚಿತ್ರೋದ್ಯಮದಿಂದ ಭರ್ಜರಿ ಸಿನಿಮಾಗಳೇ ಬೆಳ್ಳಿಪರದೆಗೆ ಎಂಟ್ರಿಕೊಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಿಂದ ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳು ತೆರೆಗೆ ಅಪ್ಪಳಿಸಿವೆ. ಈ ಪೈಕಿ ಕನ್ನಡ ಸಿನಿಮಾ 'ಸು ಫ್ರಮ್ ಸೋ' ಮತ್ತು ತಮಿಳಿನ 'ಕೂಲಿ' ಚಿತ್ರಗಳು ಸಿನಿಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿವೆ ಮತ್ತು ಬಾಕ್ಸ್​ ಆಫೀಸ್​ನಲ್ಲಿ ಲಾಭದಾಯಕ ಗಳಿಕೆ ಕಂಡಿವೆ. ಈ ಮಧ್ಯೆ ಚಿತ್ರಮಂದಿರಗಳಲ್ಲಿ ತೆರೆಕಂಡ ಒಂದಷ್ಟು ದಕ್ಷಿಣ ಭಾರತದ ಸಿನಿಮಾಗಳು ಇದೀಗ ಒಟಿಟಿಗೆ ಲಗ್ಗೆಯಿಟ್ಟಿವೆ.

ಯಾವೆಲ್ಲ ಚಿತ್ರಗಳು ರಿಲೀಸ್​?

1. ಕಪಟ ನಾಟಕ ಸೂತ್ರಧಾರಿ (ಕನ್ನಡ)

ತಾರಾಗಣ: ಅಭಿರಾಮ ಅರ್ಜುನ, ಧೀರಜ್ ಎಂವಿ, ಮುರಳಿ ಶಂಕರ್, ಗ್ರೀಷ್ಮಾ ಶ್ರೀಧರ್, ಶ್ರೀ ಸಾಗರ್, ವರುಣ್ ಗುರುರಾಜ್

ನಿರ್ದೇಶಕರು: ಧೀರಜ್ ಎಂ.ವಿ

ಜಾನರ್​: ರಾಜಕೀಯ, ಕಾಮಿಡಿ, ಡ್ರಾಮಾ

ಒಟಿಟಿ: ಸನ್​ನೆಕ್ಸ್ಟ್​

ರಿಲೀಸ್​ ದಿನಾಂಕ: ಆಗಸ್ಟ್ 22

2. ಹರಿ ಹರ ವೀರ ಮಲ್ಲು (ತೆಲುಗು)

ತಾರಾಗಣ: ಪವನ್ ಕಲ್ಯಾಣ್, ಬಾಬಿ ಡಿಯೋಲ್, ನಿಧಿ ಅಗರ್ವಾಲ್, ಸತ್ಯರಾಜ್, ವಿಕ್ರಮಜೀತ್ ವಿರ್ಕ್, ಅಯ್ಯಪ್ಪ ಪಿ. ಶರ್ಮಾ, ದಲಿಪ್ ತಾಹಿಲ್, ಸಚಿನ್ ಖೇಡೇಕರ್

ನಿರ್ದೇಶಕರು: ಕ್ರಿಶ್ ಜಗರ್ಲಮುಡಿ, ಎ.ಎಮ್ ಜ್ಯೋತಿ ಕೃಷ್ಣ

ಜಾನರ್​: ಸಾಹಸ

ಒಟಿಟಿ: ಅಮೆಜಾನ್ ಪ್ರೈಮ್

ರಿಲೀಸ್​ ದಿನಾಂಕ: ಆಗಸ್ಟ್ 20

3. ಪೆರುಮಣಿ (ಮಲಯಾಳಂ)

ತಾರಾಗಣ: ಸನ್ನಿ ವೇನ್, ವಿನಯ್ ಫೋರ್ಟ್, ಲುಕ್ಮಾನ್ ಅವರನ್, ದೀಪಾ ಥಾಮಸ್, ರಾಧಿಕಾ ರಾಧಾಕೃಷ್ಣನ್, ನವಾಸ್ ವಲ್ಲಿಕ್ಕುನ್ನು

ನಿರ್ದೇಶಕರು: ಕೆಬಿ ಮಜು

ಜಾನರ್​: ಕಾಮಿಡಿ, ಡ್ರಾಮಾ

ಒಟಿಟಿ: ಸೈನಾ ಪ್ಲೇ

ರಿಲೀಸ್​ ದಿನಾಂಕ: ಆಗಸ್ಟ್ 21

4. ತಲೈವನ್ ತಲೈವಿ (ತಮಿಳು)

ತಾರಾಗಣ: ವಿಜಯ್ ಸೇತುಪತಿ, ನಿತ್ಯಾ ಮೆನೆನ್, ಯೋಗಿ ಬಾಬು, ರೋಶಿನಿ ಹರಿಪ್ರಿಯನ್, ದೀಪಾ ಶಂಕರ್, ಮೈನಾ ನಂದಿನಿ, ಚೆಂಬನ್ ವಿನೋದ್ ಜೋಸ್, ಸರವಣನ್, ಆರ್ ಕೆ ಸುರೇಶ್, ಕಾಳಿ ವೆಂಕಟ್, ಅರುಲ್ದಾಸ್

ನಿರ್ದೇಶಕರು: ಪಾಂಡಿರಾಜ್

ಜಾನರ್​: ಫ್ಯಾಮಿಲಿ ಡ್ರಾಮಾ, ಕಾಮಿಡಿ

ಒಟಿಟಿ: ಅಮೆಜಾನ್ ಪ್ರೈಮ್ ವಿಡಿಯೋ

ರಿಲೀಸ್​ ದಿನಾಂಕ: ಆಗಸ್ಟ್ 22

5. ಸೂತ್ರವಾಕ್ಯಮ್ (ಮಲಯಾಳಂ)

ತಾರಾಗಣ: ಶೈನ್ ಟಾಮ್ ಚಾಕೋ, ವಿನ್ಸಿ ಅಲೋಶಿಯಸ್, ದೀಪಕ್ ಪರಂಬೋಲ್, ಶ್ರೀಕಾಂತ್ ಕಂದ್ರಗುಳ, ಬಿನೋಜ್ ವಿಲ್ಲ್ಯಾ, ಮೀನಾಕ್ಷಿ ಮಾಧವಿ, ನಜೀಫ್, ಅನಘಾ, ದಿವ್ಯಾ ಎಂ ನಾಯರ್

ನಿರ್ದೇಶಕರು: ಯುಜಿನ್ ಜೋಸ್ ಚಿರಮ್ಮೆಲ್

ಜಾನರ್​: ಕಾಮಿಡಿ, ಡ್ರಾಮಾ

ಒಟಿಟಿ: ಲಯನ್ಸ್‌ಗೇಟ್ ಪ್ಲೇ

ರಿಲೀಸ್​ ದಿನಾಂಕ: ಆಗಸ್ಟ್ 21

6. ಕೊತಪಲ್ಲಿಲೊ ಒಕಪ್ಪುದು (ತೆಲುಗು)

ತಾರಾಗಣ: ಮನೋಜ್ ಚಂದ್ರ, ಮೋನಿಕಾ ಟಿ, ಉಷಾ ಬೋನೆಲಾ, ರವೀಂದ್ರ ವಿಜಯ್, ಬ್ಯಾನರ್ಜಿ, ಬೊಂಗು ಸತ್ತಿ, ಫಣಿ

ನಿರ್ದೇಶಕರು: ಪ್ರವೀಣ ಪರುಚೂರಿ

ಜಾನರ್​: ಕಾಮಿಡಿ, ಡ್ರಾಮಾ

ಒಟಿಟಿ: ಆಹಾ

ರಿಲೀಸ್​ ದಿನಾಂಕ: ಆಗಸ್ಟ್ 22

7. ಮಾರೀಸನ್ (ತಮಿಳು)

ತಾರಾಗಣ: ಫಹದ್ ಫಾಸಿಲ್, ವಡಿವೇಲು, ಕೋವೈ ಸರಳ, ವಿವೇಕ್ ಪ್ರಸನ್ನ, ಸಿತಾರಾ, ಪಿಎಲ್ ತೇನಪ್ಪನ್, ಲಿವಿಂಗ್ಸ್ಟನ್, ರೇಣುಕಾ, ಸರವಣ ಸುಬ್ಬಯ್ಯ

ನಿರ್ದೇಶಕರು: ಸುಧೀಶ್ ಶಂಕರ್

ಜಾನರ್: ಕಾಮಿಡಿ, ಥ್ರಿಲ್ಲರ್

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​ ದಿನಾಂಕ: ಆಗಸ್ಟ್ 22

8. ಕೋಲಾಹಲಮ್ (ಮಲಯಾಳಂ)

ತಾರಾಗಣ: ಸಂತೋಷ್ ಪುತ್ತನ್, ಅನುಷಾ ಅರವಿಂದಾಕ್ಷನ್, ವಿಷ್ಣು ಬಾಲಕೃಷ್ಣನ್, ಪ್ರಿಯಾ ಶ್ರೀಜಿತ್, ಸ್ವಾತಿ ಮೋಹನನ್, ಚಿತ್ರ ಪ್ರಸಾದ್

ನಿರ್ದೇಶಕರು: ರಶೀದ್ ಪರಂಬಿಲ್

ಜಾನರ್​: ಕಾಮಿಡಿ

ಒಟಿಟಿ: ಸನ್​ನೆಕ್ಸ್ಟ್​

ರಿಲೀಸ್​ ದಿನಾಂಕ: ಆಗಸ್ಟ್ 22

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net