ಕೊಡಗು | ಉಂಗುರ ನುಂಗಿ ಪ್ರಾಣ ಕಳೆದುಕೊಂಡ 8 ತಿಂಗಳ ಮಗು!

Boy died
Published on

ಕೊಡಗು: ಉಂಗುರ ನುಂಗಿದ್ದ 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಮುನೀರ್ ಎಂಬುವರ ಮಗು ಬೆರಳಿಗೆ ಹಾಕಿದ್ದ ಉಂಗುರವನ್ನು ನಿನ್ನೆ ರಾತ್ರಿ ನುಂಗಿತ್ತು. ಪರಿಣಾಮ ಉಸಿರಾಟ ಸಮಸ್ಯೆಗೆ ಒಳಗಾಗಿತ್ತು. ತಕ್ಷಣವೇ ಮಗುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಉಂಗುರವನ್ನು ಹೊರತೆಗೆದಿದ್ದರು. ಇದನ್ನೂ ಓದಿ: ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಮಾಜಿಕ ಕಾರ್ಯಕರ್ತೆಯ ಹತ್ಯೆ!

ಶಸ್ತ್ರ ಚಿಕಿತ್ಸೆ ನಡೆಸಿ ಉಂಗುರ ಹೊರತೆಗೆದಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮಗು ಮೃತಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net