

ವಿವಾಹೇತರ ಸಂಬಂಧಕ್ಕೆ ಭಾರತೀಯರು ಹಿಂದಿಗಿಂತ ಹೆಚ್ಚು ಮುಂದಾಗಿದ್ದಾರೆಯೇ? ಹೌದು ಎನ್ನುತ್ತದೆ ಈ ವರದಿ!
ಗ್ಲೀಡನ್ ಎಂಬ ವಿವಾಹೇತರ ಸಂಬಂಧ ಕಲ್ಪಿಸುವ ಆ್ಯಪ್ನಲ್ಲಿ 8 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ. ಅದೂ ಹೊಸ ವರ್ಷ ಆರಂಭವಾದಗಿನಿಂದ ಇಲ್ಲಿಯವರೆಗೆ.
ಫ್ರೆಂಚ್ ಮೂಲದ ಆನ್ಲೈನ್ ಡೇಟಿಂಗ್ ಆ್ಯಪ್ ಗ್ಲೀಡನ್, ಹೆಣ್ಣುಮಕ್ಕಳಿಗಾಗಿ ರೂಪಿಸಿದೆ. ಇದಕ್ಕೆ ಸದಸ್ಯರಾಗುವವರ ಸಂಖ್ಯೆ ಶೇ.300ರಷ್ಟು ಹೆಚ್ಚಿದೆ ಎಂದು ವರದಿ ಬಂದಿದೆ.
ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿರುವ ಬೆಂಗಳೂರಿನಿಂದ ಹೆಚ್ಚು ಸದಸ್ಯರಾಗಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಮುಂಬೈ, ಕೊಲ್ಕತ್ತ, ದೆಹಲಿ, ಪುಣೆ, ಹೈದರಾಬಾದ್, ಚೆನ್ನೈ, ನೋಯ್ಡಾ, ವಿಶಾಖಪಟ್ಟಣ ಮುಂತಾದ ನಗರಗಳಿಂದಲೂ ಹೆಚ್ಚು ಹೆಚ್ಚು ನೋಂದಣಿಯಾಗಿದೆ.
ವಿವಿಧ ನಗರಗಳ ವಿವಾಹಿತ ಪುರುಷರು ಮತ್ತು ಮಹಿಳೆಯರು ವಿವಾಹೇತರ ಸಂಬಂಧಗಳನ್ನು ಹುಡುಕುತ್ತಿದ್ದಾರೆ. ಏಕೆಂದರೆ ಅವರು ಗ್ಲೀಡೆನ್‌ನಲ್ಲಿ ‘ವಿವಾಹೇತರ ಡೇಟಿಂಗ್ ಅಪ್ಲಿಕೇಶನ್’ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎನ್ನುತ್ತದೆ ವರದಿ.
ಜನವರಿಯಿಂದ ನೋಂದಾಯಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ಪ್ರತಿದಿನ ಶೇ.300ರಷ್ಟು ನೋಂದಾವಣಿಯಾಗುತ್ತಿದೆ. ಇದರಿಂದ ಈ ಬಾರಿಯ ನೂತನ ವರ್ಷದ ಆಶಯ ವಿವಾಹೇತರ ಹೊಸ ಸಂಗಾತಿಯನ್ನು ಹುಡುಕುವುದಿರಬಹುದು ಎಂದು ಗ್ಲೀಡನ್ ಅಭಿಪ್ರಾಯ ಪಟ್ಟಿದೆ. (ಏಜೆನ್ಸೀಸ್)