ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದವರ ಮೇಲೆ ಹರಿದ ಕಾರು; 8 ಮಂದಿ ಮೃತ್ಯು

SUV Run
Published on

ಅಮೆರಿಕಾ: ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದವರ ಮೇಲೆ ಕಾರು ಹರಿದು 8 ಮಂದಿ ಸಾವನ್ನಪ್ಪಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.

ಟೆಕ್ಸಾಸ್‌ನ ನಿರಾಶ್ರಿತ ವಸತಿಗೃಹದ ಬಳಿ ಎಸ್‌ಯುವಿ ಜನರ ಮೇಲೆ ಡಿಕ್ಕಿ ಹೊಡೆದ ನಂತರ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಸಂತ್ರಸ್ತರು ಬಸ್ ನಿಲ್ದಾಣದ ಹೊರಗೆ ಬಸ್‌ಗಾಗಿ ಕಾಯುತ್ತಿದ್ದರು, ಸತ್ತವರಲ್ಲಿ ವಲಸಿಗರೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಟು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 10 ಜನರು ಗಾಯಗೊಂಡಿದ್ದಾರೆ. ಕಾರು ಚಾಲಕನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಅಜಾಗರೂಕ ಚಾಲನೆ ಆರೋಪ ಹೊರಿಸಲಾಗಿದೆ. ಈ ಕುರಿತಾಗಿ ತನಿಖೆ ನಡೆಸುತ್ತೇವೆಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net