

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಸದ್ಯ ಈ ಪ್ರಕರಣ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಜಿಪಿ ವಿಕಾಸಕುಮಾರ್, ಪ್ರಕಾಶ ಬಾಕಳೆ ಅವರ ಮೊದಲನೇ ಪತ್ನಿಯ ಪುತ್ರ ವಿನಾಯಕ ಬಾಕಳೆ ಮುಖ್ಯ ಆರೋಪಿ. ಕೊಲೆ ಸುಪಾರಿಗೆ 65 ಲಕ್ಷ ರೂ. ಡೀಲ್ ಆಗಿತ್ತು. 2 ಲಕ್ಷ ಅಡ್ವಾನ್ಸ್ ನೀಡಲಾಗಿತ್ತು ಎಂಬುದು ತನಿಖೆ ಮೂಲಕ ತಿಳಿದುಬಂದಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನ ಕದಂಬ ಹೋಟೆಲ್ಗೆ ಬಾಂಬ್ ಬೆದರಿಕೆ ಪತ್ರ
ವಿನಾಯಕ ಮತ್ತು ತಂದೆ ಪ್ರಕಾಶ ನಡುವೆ ಮನಸ್ತಾಪ. ವಿನಾಯಕ ಹೆಸರಲ್ಲಿ ಪ್ರಕಾಶ್ ಆಸ್ತಿ ಮಾಡಿದ್ದರು. ಆಸ್ತಿಯಲ್ಲಿ ಕೆಲ ಭಾಗವನ್ನು ವಿನಾಯಕ ಮಾರಾಟ ಮಾಡಿದ್ದ. ನನ್ನ ಕೇಳದೆ ಆಸ್ತಿ ಮಾರಾಟ ಮಾಡುವಂತಿಲ್ಲ ಎಂದು ತಂದೆ ಪ್ರಕಾಶ್ ಮಗನಿಗೆ ವಾರ್ನಿಂಗ್ ಕೊಟ್ಟಿದ್ದರು. ಕೊಲೆಗಡುಕರಿಂದ ಮಿಸ್ ಫೈರ್: ಕೊಪ್ಪಳ ಮೂಲದ ಸಹೋದರ ಸಂಬಂಧಿ ನಿಜವಾದ ಟಾರ್ಗೆಟ್ ಆಗಿರಲಿಲ್ಲ. ಕೊಲೆ ನಂತರ ಮನೆಯಲ್ಲಿರುವ ಬಂಗಾರ, ದುಡ್ಡು ಕೊಂಡ್ಯೊಯ್ಯುವಂತೆ ಆರೋಪಿಗಳಿಗೆ ಸೂಚಿಸಲಾಗಿತ್ತು ಎಂದರು.
ಕೊಲೆ ಸಮಯದಲ್ಲಿ ಮನೆಯಲ್ಲಿ ಪ್ರಕಾಶ ಬಾಕಳೆ ಜೋರಾಗಿ ಕಿರುಚಾಡಿದ್ದು, ಪೊಲೀಸರಿಗೆ ಕರೆ ಮಾಡಿದ್ದರಿಂದ ಆರೋಪಿಗಳು ತಕ್ಷಣವೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪ್ರಕಾಶ್ ಬಾಕಳೆ ಕುಟುಂಬ ಅಂದುಕೊಂಡೆ ಆರೋಪಿಗಳು ಹತ್ಯೆಗೈದಿದ್ದಾರೆ. ವಿನಾಯಕ ಸೇರಿ 8 ಜನರ ಬಂಧನವಾಗಿದೆ. ವಿನಾಯಕ್ನಿಂದ ಫೈರೋಜ್ ಎಂಬಾತ ಕೊಲೆ ಸುಪಾರಿ ಪಡೆದಿದ್ದ. ಮಹಾರಾಷ್ಟ್ರದ ಮೀರಜ್ ಮೂಲದವರಿಗೆ ಕೊಲೆಗೆ ಸುಪಾರಿ ಕೊಡಲಾಗಿತ್ತು ಎಂದು ಹೇಳಿದ್ದಾರೆ.