ತಾನ್ಯಾ ಷಡಾಕ್ಷರಿ ಮಹಿಳೆಯರ 400 ಮೀ. ಮೆಡ್ಲೆಯಲ್ಲಿ 4 ನಿಮಿಷ, 56.78 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ, 2018ರಲ್ಲಿ ರಿಚಾ ಮಿಶ್ರಾ (4ನಿ,59.17ಸೆ) ನಿರ್ಮಿಸಿದ್ದ ದಾಖಲೆ ಮುರಿಯುವ ಮೂಲಕ ಚಿನ್ನ ಒಲಿಸಿಕೊಂಡರು.
ಅನೀಶ್ ಎಸ್. ಗೌಡ ಪುರುಷರ 200 ಮೀ. ಫ್ರೀಸ್ಟೈಲ್ನಲ್ಲಿ ಚಿನ್ನ ಗೆದ್ದರೆ, ದರ್ಶನ್ ಎಸ್. ಬೆಳ್ಳಿ ಗಳಿಸಿದರು. ಎಸ್. ಲಕ್ಷ್ಯ ಮಹಿಳೆಯರ 100 ಮೀ. ಬ್ರೆಸ್ಟ್ಸ್ಟ್ರೊಕ್ನಲ್ಲಿ ಬೆಳ್ಳಿ ಜಯಿಸಿದರು. ಮಿಶ್ರ 4/100 ಮೀ. ಮೆಡ್ಲೆ ರಿಲೇಯಲ್ಲಿ ರಾಜ್ಯ ತಂಡ ಬೆಳ್ಳಿ ಪದಕ ಒಲಿಸಿಕೊಂಡಿತು.