ಉಮ್ಮತ್ತೂರು ಚೆಕ್‌ಪೋಸ್ಟ್‌ನಲ್ಲಿ 72,310 ರೂ. ವಶ

HUN-MAR-31-2(UMMATTURU CHECKPOST)
Published on

ಹುಣಸೂರು: ತಾಲೂಕಿನ ಉಮ್ಮತ್ತೂರು ಚೆಕ್‌ಪೋಸ್ಟ್‌ನಲ್ಲಿ ವರ್ತಕರೊಬ್ಬರಿಂದ 72,310 ರೂ. ನಗದನ್ನು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಪಡಿಸಿಕೊಂಡರು.


ಶನಿವಾರ ತಡರಾತ್ರಿ 11ರ ವೇಳೆಗೆ ಎಚ್.ಡಿ.ಕೋಟೆ ಮಾರ್ಗದಿಂದ ಹುಣಸೂರು ಕಡೆ ಬರುತ್ತಿದ್ದ ಮೈಸೂರಿನ ಚಾಮುಂಡೇಶ್ವರಿ ಫುಡ್ಸ್ ಕಂಪನಿಯ ಲಾರಿಯಲ್ಲಿ ಮಾಲೀಕ ನಾಗಬಸವಣ್ಣರ ಬಳಿ ಚುನಾವಣಾ ಆಯೋಗ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಇದ್ದುದನ್ನು ಗಮನಿಸಿ ವಶಕ್ಕೆ ಪಡೆದರು. ಹಣವನ್ನು ಖಜಾನೆಗೆ ಜಮಾಗೊಳಿಸಲಾಗಿದ್ದು, ಚುನಾವಣೆ ಸಂಪನ್ನಗೊಂಡ ನಂತರ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ವಾಪಸ್ ಪಡೆಯಬಹುದಾಗಿದೆ ಎಂದು ನೋಡಲ್ ಅಧಿಕಾರಿ ಶಿವಕುಮಾರ್ ವಿಜಯವಾಣಿಗೆ ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net